ಕುಶಾಲನಗರ, ನ 13: ರಿಯಲ್ ಎಸ್ಟೇಟ್ ಉದ್ಯಮಿ ಕೊಪ್ಪ ಗ್ರಾಮದ ಸುರೇಶ್ ಹಾಗೂ ಅವರ ಪತ್ನಿ ಪಲ್ಲವಿ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತಗೊಂಡಿದೆ.
ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಮೃತದೇಹ ದೊಡ್ಡಹೊನ್ನೂರು ಕಾವಲ್ ನ ಜಮೀನಿನ ಹಳೆಯ ಖಾಲಿ ಮನೆಯೊಂದರಲ್ಲಿ ಪತ್ತೆಯಾಗಿದೆ.
ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಗೊಂಡಿದ್ದು, ಈ ಸಂಬಂಧ ಡೆತ್ ನೋಟ್ ಬರೆದಿಡಲಾಗಿದೆ ಎನ್ನಲಾಗಿದೆ. ಡೆತ್ ನೋಟ್ ಅನ್ವಯ 11 ಮಂದಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ತನಿಖೆಯಿಂದ ಘಟನೆಗೆ ಕಾರಣ ತಿಳಿದುಬರಲಿದೆ. ಮೃತದೇಹಗಳನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಮೃತ ಸುರೇಶ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
.
Back to top button
error: Content is protected !!