ಪ್ರಕಟಣೆ

ಸರಕಾರ ಅರಣ್ಯ ಇಲಾಖೆಯ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಆಕ್ರೋಷ: ಪ್ರತಿಭಟನೆಗೆ ಬೆಂಬಲ

ಕುಶಾಲನಗರ, ಆ 09: ಕರ್ನಾಟಕದ ಅದರಲ್ಲೂ ಕೊಡಗಿನ ಕಾಫಿ ಬೆಳೆಗಾರರು ಸಿ ಮತ್ತು ಡಿ ಮಾದರಿಯ ಜಮೀನಿನ ಸಂಬಂದ ಸರಕಾರದ ನೀತಿಗಳಿಂದ ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದು, ರೈತರು ಮತ್ತು ರೈತ ಸಂಘಟನೆಗಳು ಹಲವು ಪ್ರಯತ್ನಗಳನ್ನು ಮತ್ತು ಹೋರಾಟಗಳನ್ನು ನಡೆಸಿದ್ದಾಗಿಯೂ ಸರಕಾರ ತನ್ನ ಅರಣ್ಯ ಇಲಾಖೆಯ ಮೂಲಕ ರೈತರ ಜಮೀನನ್ನು ವಶ ಪಡಿಸಿಕೊಳ್ಳುವ ಪ್ರಯತ್ನವನ್ನು ವಿವಿಧ ಚಟುವಟಿಕೆಗಳ ಮೂಲಕ ಮುಂದುವರೆಸಿದೆ. ಇದು ಕೊಡಗು ಜಿಲ್ಲೆಯ ಬಹುದೊಡ್ಡ ಸಂಖ್ಯೆಯ ಅತಿ ಸಣ್ಣ ಹಿಡುವಳಿದಾರರಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ ಎಂದು ಬೆಳೆಗಾರ ನಾಪಂಡ‌ಮುತ್ತಪ್ಪ ಆರೋಪಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸೋಮವಾರಪೇಟೆ ರೈತ ಹೋರಾಟ ಸಮಿತಿ ಕರೆ ನೀಡಿರುವ ಆಗಸ್ಟ್ 12ರ ಸೋಮವಾರಪೇಟೆ ಬಂದ್’ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮತ್ತು ನಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ಈ ಬಂದ್ ನಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಲು ಸಹಕರಿಸಬೇಕು. ಸೋಮವಾರಪೇಟೆ ಭಾಗದ ಎಲ್ಲ ವರ್ತಕರು, ವ್ಯಾಪಾರಿಗಳು, ಆಟೊ, ಟ್ಯಾಕ್ಸಿ ಮತ್ತು ಇತರೆ ವಾಹನಗಳ ಮಾಲೀಕರು ಮತ್ತು ಚಾಲಕರು ಸಂಪೂರ್ಣ ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!