ನಿಧನ

ಬೈಚನಹಳ್ಳಿ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ

ಕುಶಾಲನಗರ, ಮಾ 01 : ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ಶನಿವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಪೂಜಾ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಕಂಕರಿಸಲಾಗಿತ್ತು.
ಗುಡಿಯೊಳಗಿನ ಅಮ್ಮನವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಉಮೇಶ್ ಹೊಳ್ಳ ನೇತೃತ್ವದಲ್ಲಿ ಹರಿಶ್ಚಂದ್ರ ಭಟ್, ವೇದವ್ಯಾಸ ಭಟ್, ಸೋಮಶೇಖರ ಭಟ್, ಗಿರೀಶ್ ಭಟ್, ರಾಘವೇಂದ್ರ ಭಟ್ ಸುಬ್ರಮಣ್ಯ ಭಟ್ ಅರ್ಚಕರ ತಂಡ ಹೋಮ ಹವನಾದಿ ಧಾರ್ಮಿಕ ವಿಧಿಗಳನ್ನು ನಡೆಸಿತು.
ದೇವತಾ ಸಮಿತಿ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಎಂ.ಎಂ.ಚರಣ್, ಕೋಶಾಧಿಕಾರಿ ಮುತ್ತಣ್ಣ, ನಿರ್ದೇಶಕರಾದ ಕೆ.ಎನ್.ಅಶೋಕ್, ಜಗದೀಶ್, ರಾಮಚಂದ್ರ ಸೇರಿದಂತೆ ಬೈಚನಹಳ್ಳಿಯ ಗೆಳೆಯರ ಬಳಗದ ಸದಸ್ಯರು ಇದ್ದರು.
ದೇವಾಲಯದಲ್ಲಿ ಮಹಿಳಾ ತಂಡದಿಂದ ಭಜನೆ ನಡೆಯಿತು.
ನಂತರ ನೆರೆದ ಭಕ್ತಜನರಿಗೆ ಪ್ರಸಾದ ಅನ್ನಸಂತರ್ಪಣೆ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!