ಕುಶಾಲನಗರ, ಸೆ 04: ಜಾತ್ಯತತತೆಯನ್ನು ತನ್ನ ಜೀವನದ ಉದ್ದಕ್ಕೂ ಸಾರುತ್ತ ಅದರಂತೆ ನಡೆದುಕೊಂಡ ವಿಶೇಷ ವ್ಯಕ್ತಿತ್ವದ ಮೂಸ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬೇಸರ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಸಾಪ ಕಚೇರಿಯಲ್ಲಿ ಬುಧವಾರ ಸಿದ್ದಾಪುರದ ಎಂ.ಹೆಚ್.ಮೂಸ್ ನಿಧನರಾಗಿದ್ದಕ್ಕೆ ಸಂತಾಪ ಸೂಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ, ಧರ್ಮ ನೋಡದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಾನುರಾಗಿ ಆಗಿದ್ದರು. ಪ್ರತಿ ಕಾರ್ಯಕ್ರಮಕ್ಕೂ ತನ್ನ ಕೊಡುಗೆ ಮೂಲಕ ಆಯೋಜಕರಿಗೆ ಉತ್ತೇಜನ ನೀಡುತ್ತಿದ್ದರು ಎಂದು ಶ್ಲಾಘಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿ. ಕಸಾಪ ಜಿಲ್ಲಾ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಮೂಸ ಅವರ ಅಗಲಿಕೆ ಇಡೀ ಸಮಾಜಕ್ಕೆ ನಷ್ಟ ಎಂದರು ತಪ್ಪಾಗಲಾರದು ಎಂದರು.
ಮೂಸಾ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನಾಚರಣೆ ಮಾಡಲಾಯಿತು.
ಮಹಿಳಾ ಪ್ರಧಾನ ಕಾರ್ಯದರ್ಶಿ ರೇವತಿ, ಕೋಶಾಧಿಕಾರಿ ಕನ್ನಂಡ ಸಂಪತ್ತು, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರಾ ತುಳಸಿ ಇತರರು ಹಾಜರಿದ್ದರು.
Back to top button
error: Content is protected !!