ಸಭೆ

ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸೋಮವಾರಪೇಟೆ, ಏ 02: ಸೋಮವಾರಪೇಟೆ ಅಲೋಕ್ ಸಭಾಂಗಣದಲ್ಲಿ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅದ್ಧೂರಿಯಾಗಿ ನಡೆಯಿತು.

ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಡಾ. ಬಿ ಎ ದಿನೇಶ್ ಶೆಟ್ಟಿ, ಜಿಲ್ಲಾ ಸಂಚಾಲಕ ಎಂ.ಎಸ್. ಮಣಿಕಂಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ರವರು ಸೇರಿದಂತೆ ಜಿಲ್ಲಾ ಮತ್ತು ವಿವಿಧ ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾಧ್ಯಕ್ಷ ಡಾ. ಬಿ ಎ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಚಾಲಕ ಎಂ ಎಸ್ ಮಣಿಕಂಠ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಭೆಯನ್ನುದ್ದೇಶಿಸಿ ಜಿಲ್ಲಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ, ನೆರೆದಿದ್ದ ಕಾರ್ಯಕರ್ತರುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತತ್ವ-ಸಿದ್ಧಾಂತಗಳ ಬಗ್ಗೆ ಹಾಗೂ ಕರವೇ ಹೋರಾಟದ ಹಿನ್ನೆಲೆಯನ್ನು ವಿವರಿಸಿ ಹೇಳಿದರು.

ಸಭೆಯಲ್ಲಿ ಸೋಮವಾರ ಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಸೋಮೇಶ್ ಅವರನ್ನು, ಜಿಲ್ಲಾ ಉಪಾಧ್ಯಕ್ಷರಾಗಿ ಸೋಮವಾರಪೇಟೆಯ ವಿನ್ಸೆಂಟ್ ಲೋಬೋ ಅವರನ್ನು ಹಾಗೂ ಕುಶಾಲನಗರದ ನಿರ್ಮಲ‌ ಸುರೇಶ್ ಅವರನ್ನು,ಜಿಲ್ಲಾ ಗೌರವಾಧ್ಯಕ್ಷರಾಗಿ ನಾಗರಾಜು ಹೆಚ್ ಕಾವಲ್ ಕೊಂಡ ಅವರನ್ನು, ಜಿಲ್ಲಾ ಕಾರ್ಯದರ್ಶಿಗಳಾಗಿ ಸರಳಾ ರಾಮಣ್ಣ ಅವರನ್ನು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಸೋಮವಾರಪೇಟೆಯ ರಿತೇಶ್ ಮೋಂತೆರೊ ಅವರನ್ನು,ಕುಶಾಲನಗರ ತಾಲ್ಲೂಕಿನ ಅಧ್ಯಕ್ಷರಾಗಿ  ಪುಟ್ಟಸ್ವಾಮಿ ಅವರನ್ನು, ಕುಶಾಲನಗರ ತಾಲ್ಲೂಕಿನ ಕಾರ್ಯದರ್ಶಿಗಳಾಗಿ ಅನಸೂಯ ಗಣೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾದ ಎಂ ಎಸ್ ಮಣಿಕಂಠ ಅವರು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು ಹಾಗೂ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಕನ್ನಡ ನೆಲ-ನಾಡು-ನುಡಿ-ಭಾಷೆ-ಸಂಸ್ಕೃತಿಯ ರಕ್ಷಣೆಗೆ ತಾವುಗಳು ಸದಾ ಬದ್ಧವಾಗಿರುತ್ತೇವೆ ಎಂದು ಪ್ರಮಾಣ ಮಾಡಿ , ಜವಾಬ್ದಾರಿಯನ್ನು ವಹಿಸಿಕೊಂಡರು.

Related Articles

Leave a Reply

Your email address will not be published. Required fields are marked *

Back to top button
error: Content is protected !!