ಕುಶಾಲನಗರ, ಜು 23: (ಕುಶಲವಾಣಿ updates) ಕೂಡ್ಲೂರಿನ ಮಾವಿನ ತೋಪು ಬಳಿ ಪಿಕ್ಅಪ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಅಪ್ರಾಪ್ತ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಗೋಪಾಲ್ ಸರ್ಕಲ್ ನಿವಾಸಿ ಸಿದ್ದರಾಜು ಅವರ ಪುತ್ರ ಶಾಯನ್ (17) ಮೃತ ದುರ್ದೈವಿ. ಹಿಂಬದಿ ಸವಾರ ಕುಶಾಲನಗರದ ಇಂದಿರಾ ಬಡಾವಣೆಯ ಮಿಥುನ್ ಅವರ ಪುತ್ರ ಧನುಷ್ ಗೆ ಗಂಭೀರ ಗಾಯಗಳಾಗಿವೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಕುಶಲವಾಣಿ updates)
Back to top button
error: Content is protected !!