ಟ್ರೆಂಡಿಂಗ್

ಕೊಲೆ ಯತ್ನ ಆರೋಪ: ವಕೀಲ, ಪುರಸಭಾ ಸದಸ್ಯ ಸೇರಿದಂತೆ 8 ಜನರ ಮೇಲೆ ಎಫ್ಐಆರ್ ದಾಖಲು

ಪಿರಿಯಾಪಟ್ಟಣ, ಜು 05: ತನ್ನ ಸ್ವಂತ ಅಳಿಯನ ಕೊಲೆ ಯತ್ನದ ಆರೋಪದಡಿಯಲ್ಲಿ ಪಟ್ಟಣದ ಹಿರಿಯ ವಕೀಲ ಸಿ.ಕೆ. ಮಂಜುನಾಥ್ ಮತ್ತು ಪುರಸಭಾ ಸದಸ್ಯ ಪಿ.ಸಿ.ಕೃಷ್ಣ ಸೇರಿದಂತೆ ಎಂಟು ಜನರು ವಿರುದ್ಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಹಿರಿಯ ವಕೀಲ ಸಿ.ಕೆ.ಮಂಜುನಾಥ್, ಅವರ ಪತ್ನಿ ಜಯಲಕ್ಷ್ಮಿ, ಮಗಳು ಪದ್ಮಿನಿ, ಪುರಸಭಾ ಸದಸ್ಯ ಪಿ.ಸಿ.ಕೃಷ್ಣ, ಲೋಕೇಶ್, ವಾಗೀಶ, ನರಪತ್, ಅಣ್ಣೇಗೌಡ ಎಂಬುವವರು ವಿರುದ್ಧ ಪ್ರಕರಣ ದಾಖಲಾಗಿದ್ದು ಸಿ.ಕೆ.ಮಂಜುನಾಥ್ ಅವರ ಅಳಿಯ ಸುಪ್ರೀತ್ ರಾವ್ ಅವರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರಿಂದ ಪಿರಿಯಾಪಟ್ಟಣ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 160/2024 ಅಡಿಯಲ್ಲಿ 307, 143, 504, 341, 323, 560, 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!