ಕಾರ್ಯಕ್ರಮ

ಕಳೆದ ಎರಡು ವರ್ಷಗಳಿಂದ ಮುಚ್ಚಲ್ಟಟ್ಟಿದ್ದ ಮಾದಾಪಟ್ಟಣ ಅಂಗನವಾಡಿ-1 ಕೇಂದ್ರ ಪುನರಾರಂಭ

ಕುಶಾಲನಗರ, ‌ಮಾ 09: ಕಳೆದ ಎರಡು ವರ್ಷಗಳಿಂದ ಕಾರಣಾಂತರಗಳಿಂದ ಮುಚ್ಚಲ್ಟಟ್ಟಿದ್ದ ಮಾದಾಪಟ್ಟಣ ಅಂಗನವಾಡಿ-1 ಕೇಂದ್ರವನ್ನು ಪುನರಾರಂಭಿಸಲಾಯಿತು.

ಗ್ರಾಮದ ಕಾಂಗ್ರೆಸ್ ಮುಖಂಡರೂ ಆದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ಹೆಚ್.ಜೆ. ದಾಮೋದರ್ ಮತ್ತಿತರರು ಮಕ್ಕಳಿಗೆ ಹೂ ಮತ್ತು ಸಿಹಿ‌ ನೀಡಿ ಅಂಗನವಾಡಿಗೆ ಬರಮಾಡಿಕೊಂಡು ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ದಾಮೋದರ್, ದೊಡ್ಡ ಗ್ರಾಮವಾಗಿರುವ ಮಾದಾಪಟ್ಟಣದಲ್ಲಿ ಈ ಅಂಗನವಾಡಿ ಮುಚ್ಚಿದ ಹಿನ್ನೆಲೆಯಲ್ಲಿ ದೂರದ ಅಂಗನವಾಡಿಗೆ ಮಕ್ಕಳನ್ನು ಕರೆದೊಯ್ಯುವ ಪೋಷಕರು ಮಕ್ಕಳ ಪರಿಸ್ಥಿತಿ ಗಮನಿಸಿ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರ ಸೂಚನೆ ಅನುಸಾರ ಈ ಅಂಗನವಾಡಿ ಕೇಂದ್ರವನ್ನು ಮತ್ತೆ ತೆರೆಯಲಾಗಿದೆ. ಶಾಸಕರ ಅನುದಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೀಘ್ರದಲ್ಲೇ ಈ ಅಂಗನವಾಡಿ ಕೇಂದ್ರವನ್ನು ದುರಸ್ಥಿಗೊಳಿಸಿ ಅಭಿವೃಪಡಿಸಲು ಹಾಗೂ ಖಾಯಂ ಶಿಕ್ಷಕಿ ಹಾಗೂ ಸಹಾಯಕಿ ನೇಮಕಾತಿಗೆ
ಕ್ರಮವಹಿಸುವುದಾಗಿ ತಿಳಿಸಿದರು.

ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ಕಟ್ಟಡ ಶಿಥಿಲಾವಸ್ಥೆ ನೆಪವೊಡ್ಡಿ ಕಳೆದ ಎರಡು ವರ್ಷಗಳಿಂದ ಅಂಗನವಾಡಿಗೆ ಬೀಗ ಹಾಕಿದ ಪ್ರಸಂಗ ಶೋಚನೀಯ. ಕಟ್ಟಡ ಹಳೆದಾದರೆ ಇಲಾಖೆ ಮೂಲಕ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವುದು ಬಿಟ್ಟು ಅಂಗನವಾಡಿ ಮುಚ್ಚಿ ಮಕ್ಕಳಿಗೆ ಅನಾನುಕೂಲ ಸೃಷ್ಠಿಸುವುದು ಸರಿಯಲ್ಲ ಎಂದರು.

ಇದೇ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ನಮ್ಮ ಅಹವಾಲು ಆಲಿಸಬೇಕಿದೆ, ಮೂಲಭೂತ ಸೌಕರ್ಯ ಒದಗಿಸಲು ಕ್ರಮವಗಿಸಬೇಕಿದೆ ಎಂದು ಪೋಷಕರು ಒತ್ತಾಯಿಸಿದರು.

ಈ ಸಂದರ್ಭ ಬೂತ್ ಅಧ್ಯಕ್ಷ ಮಹೇಶ್, ಯುವ ಕಾಂಗ್ರೆಸ್ ವಲಯಾಧ್ಯಕ್ಷ ವಿಜಯ್ ಕುಮಾರ್, ಕಾರ್ಯಕರ್ತ ರವಿ ಎಂ.ಆರ್. ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!