ಪ್ರಕಟಣೆ

ಫೆ.8 ರಂದು ಕವಿಗೋಷ್ಠಿ: ಕವನಗಳಿಗೆ ಆಹ್ವಾನ

ಕುಶಾಲನಗರ, ಫೆ 02: ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಕೃತಿಯ ಮಡಿಲ ತಾಣದೊಳಗೆ ನಾಡೋಜ ಜನಕವಿ ಡಾ// ಸಿದ್ದಲಿಂಗಯ್ಯನವರ ಜನ್ಮದಿನೋತ್ಸವ ಅಂಗವಾಗಿ ದಿನಾಂಕ:8/2/2026ರ ಭಾನುವಾರದಂದು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಭಾಗವಹಿಸಲಿಚ್ಚಿಸುವ ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನವನ್ನು ದಿನಾಂಕ:5/2/2026ರಳೊಗೆ ಈ ಕೆಳಕಂಡ ಮೊಬೈಲ್ ನಂಬರ್ ಗೆ ವಾಟ್ಸಪ್ ಮೂಲಕ ಕಳಿಸಿಕೊಡುವಂತೆ ನೌಕರರ ಸಮಿತಿಯ ಅಧ್ಯಕ್ಷರಾದ ಮಹೇಂದ್ರ ಎಂಎಸ್ ರವರು ತಿಳಿಸಿರುತ್ತಾರೆ.
ವಿಶೇಷ ಸೂಚನೆ:
* ಕವನದ ಶೀರ್ಷಿಕೆಯು “ಪ್ರಗತಿಪರ ಜನಮುಖಿ ಶೋಷಿತ ಸಮಾಜದ” ಕುರಿತಾಗಿ ಒಳಗೊಂಡಿರಬೇಕು.
* ಕವನವು 20 ಸಾಲುಗಳೊಳಗೆ ಮಿತಿಗಿಂತ ಹೆಚ್ಚಿರಬಾರದು.
* ಕವನ A4 ಶೀಟ್ ನ ಒಂದೇ ಬದಿಯಲ್ಲಿ ರಚನೆಗೊಂಡಿರಬೇಕು.
* ಕವಿಗಳು ಪಾಸ್ಪೋರ್ಟ್ ಸೈಜಿನ ತಮ್ಮ ಫೋಟೋವನ್ನು ಸಹ ಕಳಿಸಿ ಕೊಡಬೇಕು
* ತಮ್ಮ ಸಂಪೂರ್ಣ ವಿಳಾಸದೊಂದಿಗೆ ಮೊಬೈಲ್ ನಂಬರ್ ಸಹ ಬರೆಯಬೇಕು
* ಈ ಕವಿಗೋಷ್ಠಿಗೆ ಕಳಿಸಲಾಗುವ ಎಲ್ಲಾ ಕವಿ ಸಹೃದಯಗಳ ಸ್ವರಚಿತ ಕವನಗಳನ್ನು ಕೃತಿ ಸಂಪುಟದಲ್ಲಿ ಕವನ ಸಂಕಲನವಾಗಿ ಪ್ರಕಟಿಸಲಾಗುವುದು
* ತೀರ್ಪುಗಾರರಿಂದ ಆಯ್ಕೆಗೊಂಡ ಉತ್ತಮ ಕವನಗಳಿಗೆ ಮೊದಲು ವಾಚಿಸಲು ಅವಕಾಶವಿರುತ್ತದೆ.
* ಕಾರ್ಯಕ್ರಮದಂದು 10 ಗಂಟೆ ಒಳಗಡೆ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿರುತದೆ.
ಹೆಚ್ಚಿನ ಮಾಹಿತಿಗಾಗಿ:
9481545050,
9663714812,
9731818550,
ಸ್ಥಳ :ರೈಸಿಂಗ್ ಸೂರ್ಯ ಹೋಂಸ್ಟೇ (ಗುಡ್ಡೆ ಹೊಸೂರು ಹಾರಂಗಿ ಮಾರ್ಗ ಮಧ್ಯ)

Related Articles

Leave a Reply

Your email address will not be published. Required fields are marked *

Back to top button
error: Content is protected !!