ಸಾಮಾಜಿಕ

ಅಪಘಾತದಲ್ಲಿ ಮೃತಪಟ್ಟ ಯುವಕನ ಪೋಷಕರಿಗೆ ಕೆ.ಬಿ.ಎಲ್.ಯೋಜನೆಯ 10 ಲಕ್ಷ ವಿತರಣೆ

ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದ ಅಧಿಕಾರಿ ವೃಂದ

ಕುಶಾಲನಗರ, ಜೂ 13: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಕೊಪ್ಪ ಗ್ರಾಮದ ಯುವಕ ಕೆ.ಆರ್.ಅಶ್ವಿನ್ ಅವರ ಪೋಷಕರಿಗೆ ಕುಶಾಲನಗರ ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ರೂ 10 ಲಕ್ಷ ವಿತರಣೆ ಮಾಡಲಾಯಿತು.

ಮೃತ ಯುವಕ ಅಶ್ವಿನ್ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು ಕೆ.ಬಿ.ಎಲ್.ಸುರಕ್ಷಾ ಪಾಲಿಸಿ ಯೋಜನೆಗೆ ನೋಂದಣಿಯಾಗಿದ್ದ. ವಾರ್ಷಿಕ ಕೇವಲ 300 ರೂ ಪ್ರೀಮಿಯಂ ಪಾವತಿಸಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಯೋಜನೆಯ ಮೌಲ್ಯ ರೂ 10 ಲಕ್ಷ ಮೊತ್ತದ ಚೆಕ್ ಅನ್ನು ಮೃತನ ಪೋಷಕರಾದ ರಾಜು ಮತ್ತು ಗುಲಾಬಿ ದಂಪತಿಗೆ ಕರ್ಣಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು ಮತ್ತು ಕ್ಲಷ್ಟರ ಹೆಡ್ ಜಯಾನಂದ ದೇವಾಡಿಗ ಹಸ್ತಾಂತರಿಸಿದರು.

ಈ ಸಂದರ್ಭ ಕುಶಾಲನಗರ ಶಾಖೆ ವ್ಯವಸ್ಥಾಪಕ ಕೆ.ಸುಧೀರ್‌ನಾರಾಯಣ, ಹಿರಿಯ ಗ್ರಾಹಕ ಎಸ್.ಎಲ್‌. ಶ್ರೀಪತಿ, ಸೀತಾಲಕ್ಷ್ಮಿ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!