ಅರಣ್ಯ ವನ್ಯಜೀವಿ

ಹೇರೂರಿನಲ್ಲಿ ಎರಡು ತಿಂಗಳಿಂದ ಒಂಟಿ ಸಲಗ ಉಪಟಳ: ಕಾಡಾನೆ ನಿಯಂತ್ರಣಕ್ಕೆ ಬೆಳೆಗಾರರ ಒತ್ತಾಯ

ಕುಶಾಲನಗರ, ಜೂ 13: ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ ಕಳೆದೆರೆಡು ತಿಂಗಳಿಂದ ನಿರಂತರವಾಗಿ ಒಂಟಿ ಸಲಗವೊಂದು ಲಗ್ಗೆಯಿಟ್ಟು ತೋಟಗಳಿಗೆ ದಾಳಿ ಮಾಡಿ ಫಸಲನ್ನು ಹಾನಿಗೊಳಿಸುತ್ತಿದೆ.

ಈ ಭಾಗದ ಚಂದ್ರಶೇಖರ್, ಅರುಣ್ ಚಂಗಪ್ಪ, ನಂಜೇಗೌಡ, ಸುಜಾತ ಮತ್ತಿತರರ ತೋಟಗಳಿಗೆ ನುಗ್ಗಿ ಕಾಫಿ, ತೆಂಗು, ಅಡಕೆ ಬೆಳೆಗಳನ್ನು ನಾಶಗೊಳಿಸುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇದೀಗ ನಮ್ಮ ತೋಟದಲ್ಲಿ 20 ಅಡಕೆ, ತೆಂಗಿ ಸೇರಿದಂತೆ 30 ಕ್ಕೂ ಅಧಿಕ ಕಾಫಿ ಗಿಡಗಳನ್ನು ಕಾಡಾನೆ ನೆಲಸಮಗೊಳಿಸಿದೆ. ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕಿದೆ. ಆನೆ ಕಂದಕ, ಸೋಲಾರ್ ಬೇಲಿ ಅಥವಾ ರೈಲ್ವೇ ಬ್ಯಾರಿಕೆಡ್ ಅಳವಡಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇರೂರು ಚಂದ್ರಶೇಖರ್ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!