ಕುಶಾಲನಗರ, ಜೂ 04: ಲೋಕಸಭಾ ಚುನಾವಣೆಯಲ್ಲಿ
ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕುಶಾಲನಗರ ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ ನಡೆಯಿತು.
ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ವಿಜಯೋತ್ಸವ ಆಚರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ನೃತ್ಯಮಾಡುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ಕೇಂದ್ರದಲ್ಲಿ ಎನ್.ಡಿ.ಎ.ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿಗೆ ಕೊಡಗಿನಿಂದ 50 ಸಾವಿರಕ್ಕೂ ಅಧಿಕ ಮತಗಳ ಲೀಡ್ ನೀಡಿದ್ದು, ಯದುವೀರ್ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಸಹಕಾರ ನೀಡಿದ ಬಿಜೆಪಿ ಹಾಗೂ ಜೆಡಿಎಸ್ ಮತದಾರರು, ಕಾರ್ಯಕರ್ತರು, ಮುಖಂಡರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಕುಶಾಲನಗರ ಪುರಸಭೆ ಸದಸ್ಯ ಬಿ.ಜೈವರ್ಧನ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಮತದಾರರು ಸ್ಮರಿಸಿದ್ದಾರೆ. ನಿರೀಕ್ಷೆಯಂತೆ ಯದುವೀರ್ ಅವರು ಗೆಲುವು ಸಾಧಿಸಿದ್ದಾರೆ. ಕೊಡಗಿನ ಮಾಜಿ ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಸೇರಿದಂತೆ ಜಿ.ಟಿ.ದೇವೇಗೌಡ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಇದೇ ಸಂದರ್ಭ ಕುಶಾಲನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಮಾತನಾಡಿ,
ಪ್ರದೀಪ್ ಈಶ್ವರ್ ರಾಜಿನಾಮೆ ನೀಡುವಂತೆ ಒತ್ತಾಯಿಸಿದರು.
ವಿಜಯೋತ್ಸವ ದಲ್ಲಿ ಬಿಜೆಪಿ ಮುಖಂಡರಾದ ಮಧುಸೂದನ್, ಉಮಾಶಂಕರ್, ಡಿ.ಕೆ.ತಿಮ್ಮಪ್ಪ, ನಾರಾಯಣ, ಪುಂಡರೀಕಾಕ್ಷ, ಎಂ.ಡಿ.ಕೃಷ್ಣಪ್ಪ, ಚಂದ್ರಶೇಖರ್ ಹೆರೂರು, ವೈಶಾಖ್, ಪ್ರವೀಣ್, ಬಾಲಾಜಿ, ಮಣಿ, ರಾಮನಾಥನ್, ಅವಿನಾಶ್, ಸಂತೋಷ್, ನವನೀತ್, ಬೋಸ್ ಮೊಣ್ಣಪ್ಪ, ಆದರ್ಶ್, ಜೆಡಿಎಸ್ ನ ಎಂ.ಬಿ.ಸುರೇಶ್, ಚಂದ್ರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಘಟಕದ ಪ್ರಮುಖರು ಇದ್ದರು.
Back to top button
error: Content is protected !!