ವಿಶೇಷ

ಮೋದಿ‌ ಸರ್ಕಾರ ಬರಬೇಕೆಂದು ಚಪ್ಪಲಿ ಧರಿಸದೆ ವ್ರತ ಆಚರಿಸುತ್ತಿರುವ ಭಜರಂಗದಳ ಕಾರ್ಯಕರ್ತ

ಕುಶಾಲನಗರ, ಏ 17: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಯುವಕ ಪ್ರವೀಣ್ ಎಂಬಾತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿ ಸರಕಾರವನ್ನು ಮುನ್ನಡೆಸಬೇಕು ಎಂದು ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದಾರೆ. ಹರಕೆ ಹೊತ್ತಿರುವ ಹಿನ್ನೆಲೆಯಲ್ಲಿ ಚಪ್ಪಲಿ ತ್ಯಜಿಸಿರುವ ಪ್ರವೀಣ್ ಅಯ್ಯಪ್ಪ ಮಾಲಾಧಾರಿಯಂತೆ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವರೆಗೂ ವ್ರತ ಆಚರಿಸುವುದಾಗಿ ಶಪಥ ಮಾಡಿದ್ದಾರೆ.ಇತ್ತೀಚೆಗೆ ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಪ್ರಧಾನಿ ಮೋದಿಯವರು ಬಂದ ಸಂಧರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಬರಮಾಡಿಕೊಳ್ಳಲು ಅನುಮತಿ ದೊರೆತ ಕೆಲವು ಮಂದಿಯಲ್ಲಿ ಪ್ರವೀಣ್ ಕೂಡ ಒಬ್ಬರು. ವಿಮಾನ ನಿಲ್ದಾಣದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಬರೀ ಕಾಲಿನಲ್ಲಿ ಪ್ರಧಾನಿಯನ್ನು ಸ್ವಾಗತಿಸಲು ನಿಂತಿದ್ದರು.

ಯದುವೀರ್ ಜೀ ರವರು ಗೆಲ್ಲಬೇಕು ಹಾಗೂ ಮೋದಿಜಿಯವರು ಮೂರನೇ ಭಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನದವರೆಗೂ ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಮೋದಿಜಿಯವರು ಪ್ರಧಾನಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿ ದರ್ಶನ ಮಾಡಿ ನಂತರ ಚಪ್ಪಲಿ ಹಾಕುತ್ತೇನೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!