ಕುಶಾಲನಗರ ಮಾ11: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ವಾಣಿಜ್ಯ ಕಟ್ಟಡದ ಮಳಿಗೆಯಲ್ಲಿ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿರುವುದನ್ನು ನ್ಯಾಯಾಲಯದ ಆದೇಶದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕೊಪ್ಪ ಮುಖ್ಯ ರಸ್ತೆಯ ಬದಿಯಲ್ಲಿರುವ ಪಂಚಾಯಿತಿ ವಾಣಿಜ್ಯ ಮಳಿಗೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಕುಶಾಲನಗರ ದಂಡಿನಪೇಟೆಯ ನಿವಾಸಿ, ಮೀರಾ ಮೊಹಿದೀನ್ ಎಂಬಾತ ಅಕ್ರಮವಾಗಿ ಆಡು, ಕುರಿ ಮಾಂಸ ಮಾರಾಟ ಅಕ್ರಮವಾಗಿ ಮಾಡುತ್ತಿದ್ದು ನ್ಯಾಯಾಲಯ ಆದೇಶ ನೀಡಿದರೂ ಬೆಲೆ ನೀಡದೆ ಉಲ್ಲಂಘನೆ ಮಾಡುವ ಮೂಲಕ ಅಕ್ರಮವಾಗಿ ಪ್ರಾಣಿಗಳನ್ನು ಸ್ಥಳದಲ್ಲಿ ಕತ್ತರಿಸಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮತ್ತು ಪಂಚಾಯತಿ ಅಧ್ಯಕ್ಷೆ ಶೀಲಾ ಅವರ ನೇತೃತ್ವದಲ್ಲಿ ಸೋಮವಾರ ಬೈಲುಕೊಪ್ಪೆ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಅಂಗಡಿಗಳಿಗೆ ಬೇಗ ಜಡಿದು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ಕೆ ನಾರಾಯಣ, ರಾಜಪ್ಪ, ಪಂಚಾಯಿತಿ ಕಾರ್ಯದರ್ಶಿ ಮಹದೇವ್ , ಬಿಲ್ ಕಲೆಕ್ಟರ್ ರತ್ನಮ್ಮ, ಸಿಬ್ಬಂದಿಗಳು ತೆರವು ಕಾರ್ಯದಲ್ಲಿ ತೊಡಗಿದ್ದರು.
Back to top button
error: Content is protected !!