ಕುಶಾಲನಗರ, ಮಾ 06: ಅರಣ್ಯ ವಸತಿ ಮತ್ತು ವಿಹಾರಧಾಮಗಳು ನಿಯಮಿತ(ಕರ್ನಾಟಕ ಸರ್ಕಾರದ ಉದ್ಯಮ) ಮತ್ತು ಏಸ್ ಪ್ಯಾಡ್ಲರ್ಸ್ ಪ್ರೈಲಿ. ಸಹಯೋಗದಲ್ಲಿ ಕುಶಾಲನಗರ ಹಾರಂಗಿ ಜಲಾಶಯದ ಹಾರಂಗಿ ಆನೆ ಶಿಬಿರ ಮತ್ತು ವೃಕ್ಷೋದ್ಯಾನದಲ್ಲಿ ಆರಂಭಿಸಿರುವ
ಹಾರಂಗಿ ಜಲ ಸಾಹಸ ಕ್ರೀಡೆಗಳು ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆರಂಭದಲ್ಲೇ ವಿರೋಧ ವ್ಯಕ್ತಗೊಂಡಿದೆ. ಬೇಸಿಗೆ ಕಾರಣ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಎದುರಾಗಿದೆ.ಇದರ ನಡುವೆ ಈ ಸಾಹಸ ಕ್ರೀಡೆ ಇರುವ ನೀರನ್ನು ಕಲುಷಿತಗೊಳಿಸಲಿದೆ. ಅಲ್ಲದೆ ಹಿನ್ನೀರಿನಲ್ಲಿ ಮರಗಳು ಮುರಿದು ಬಿದ್ದು ಅಪಾಯಕಾರಿ ವಾತಾವರಣ ಸೃಷ್ಠಿಸಿದೆ. ಮೊನಚು ರೋತಿಯಲ್ಲಿ ನೀರಿನೊಳಗೆ ಇರುವ ಮರದ ಅವಶೇಷಗಳು ಪ್ರವಾಸಿಗರಿಗೆ ಅಪಾಯ ಉಂಟುಮಾಡಲಿದೆ. ಇಷ್ಟೆಲ್ಲಾ ಅಪಾಯವಿದ್ದರೂ ಸಾಹಸ ಕ್ರೀಡೆ ಆರಂಭಿಸಲು ಆಕ್ಷೇಪ ವ್ಯಕ್ತಪಡಿಸಿದರು ಕೂಡ ಎಲ್ಲವನ್ನು ಬದಿಗೊತ್ತಿ ಈ ಯೋಜನೆಗೆ ಚಾಲನೆ ನೀಡುತ್ತಿರುವ ಬಗ್ಗೆ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!