ಟ್ರೆಂಡಿಂಗ್

ಕೂಡುಮಂಗಳೂರು ಗ್ರಾಪಂ ಕಟ್ಟಡಕ್ಕೆ ಕೃಷಿ ಇಲಾಖೆ‌ ಜಾಗ ಮಂಜೂರಿಗೆ ಸಚಿವರಿಗೆ ಮನವಿ

ಕುಶಾಲನಗರ, ಜ‌ 11: ಕೂಡುಮಂಗಳೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಹೊಸದಾಗಿ ಗುರುತಿಸಿರುವ ಕೃಷಿ ಇಲಾಖೆ ಜಾಗವನ್ನು ಮೀಸಲಿರಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎನ್ ಬೋಸರಾಜು ರವರಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಜಿಲ್ಲಾ ಪಂಚಾಯಿತಿ ಸಿಇಒ ವರ್ಣೀತ್ ನೇಗಿ ರವರೊಂದಿಗೆ ಮನವಿ ಮಾಡಿದರು.

ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ ಅಧ್ಯಕ್ಷ ಭಾಸ್ಕರ ನಾಯಕ್ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಟ್ಟಡವು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಸಂದರ್ಭ ಕಟ್ಟಡವನ್ನು ತರುವ ಗೊಳಿಸಬೇಕಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಾಗವನ್ನು ಗುರುತಿಸಿರುವುದರಿಂದ ಸದರಿ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ವರ್ಗಾಯಿಸಿ ಕೊಡಬೇಕೆಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು ಕೃಷಿ ಇಲಾಖೆ ಜಾಗವಾಗಿರುವುದರಿಂದ ಕೃಷಿ ಇಲಾಖೆ ಸಚಿವರೊಂದಿಗೆ ಮಾತನಾಡಿ ಜಾಗವನ್ನು ಮಂಜೂರು ಮಾಡಿಕೊಡುವ ಬಗ್ಗೆ ಭರವಸೆ ನೀಡಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!