ಕುಶಾಲನಗರ, ಫೆ 28: ಕುಶಾಲನಗರದ
ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ವತಿಯಿಂದ ಆಯೋಜಿಸಲಾದ “ಕಲಾರಂಭ” ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ, ಸಂಗೀತ, ನೃತ್ಯ, ನಾಟಕ ಹಾಗೂ ಭಾಷಣ ಪ್ರತಿಭೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ಪರ್ಧೆಗಳಾದ ಗಾಯನ, ನೃತ್ಯ, ವೇಷಭೂಷಣ, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಓಡಿಯಾನ ಪುಷ್ಪವತಿ ಕೃಷ್ಣಪ್ಪ , ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಲಿಖಿತ ಟಿ ಎ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ವಿವೇಕಾನಂದ ವಿದ್ಯಾ ಸಂಸ್ಥೆಯ ಕಚೇರಿ ಅಧೀಕ್ಷಕ ಮಹೇಶ್ ಆಮೀನ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಕ್ರಂ ರವರು ಉಪಸ್ಥಿತರಿದ್ದರು.
ಕಲಾರಂಭ ವೇದಿಕೆ ಇನ್ನೊಂದು ವಿಶೇಷತೆಗೆ ಕಾರಣವಾಯಿತು. ಬೈಟ್ಸ್ ಟು ಬಿಟ್ಸ್ ಸಂಸ್ಥೆ ಕಾರ್ಯನಿರ್ವಾಹಕರಾದ ರೋಷನ್ ರವರು ಕೃತಕ ಬುದ್ದಿಮತ್ತೆ (AI) ಪರೀಕ್ಷೆ ಯನ್ನು ಎಂಜಿಎಂ ಪದವಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಇದರಲ್ಲಿ 08 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಶಸ್ತಿ ಪತ್ರ ಪಡೆದರು.ಆಯ್ಕೆಯಾದ 04 ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ವತಿಯಿಂದ 25,000 ಉಚಿತ ಕೋರ್ಸ್ ಪಡೆಯಲು ಅವಕಾಶ ದೊರೆತಿದೆ. ತೃತೀಯ ಬಿಸಿಎ ವಿದ್ಯಾರ್ಥಿಗಳಾದ ವಿಧಿಶ ಬೋದ , ತೃಪ್ತಿ, ಶರಣ್ ವಿ.ಎಂ , ದ್ವಿತೀಯ ಬಿಸಿಎ ವಿನಯ್ ಆಯ್ಕೆಯಾಗಿದ್ದಾರೆ ಹಾಗೂ ಮೂರು ವರ್ಷ ಎಐ ಮಾರ್ಗದರ್ಶನವನ್ನು ಪಡೆಯಲಿದ್ದಾರೆ. ಎಂದು ಸಂಸ್ಥೆಯ ಕಾರ್ಯನಿರ್ವಾಹಕ ರಾದ ರೋಷನ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಿರೂಪಣೆ ದೀಪ್ತಿ ಡಿ ಸೋಜ ನಡೆಸಿಕೊಟ್ಟರು. ಪದವಿ ಕಾಲೇಜಿನ ಬೋಧಕ ವರ್ಗ ಮತ್ತು ಬೋಧಕೇತರ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!