ಸಾಮಾಜಿಕ

ಸರಕಾರಿ ಜಾಗ, ಕಟ್ಟಡಗಳ ಸಂರಕ್ಷಣೆಗೆ ಅಧಿಕಾರಿಗಳು ಕ್ರಮವಹಿಸಬೇಕು: ಮಾಜಿ ಶಾಸಕ ಅಪ್ಪಚ್ಚುರಂಜನ್.

ಕುಶಾಲನಗರ ಜ. 01: ಜಿಲ್ಲೆಯ ಮತ್ತು ತಾಲ್ಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ ಜಾಗ ಮತ್ತು ಕಟ್ಟಡಗಳ ಸಂರಕ್ಷಣೆ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಮಾಜಿ ಶಾಸಕರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭ ಮದಲಾಪುರ ಗ್ರಾಮದಲ್ಲಿರುವ ಹೆಬ್ಬಾಲೆ ಉಪ ಆರೋಗ್ಯ ಕೇಂದ್ರದ ಬಗ್ಗೆ ಗ್ರಾಮಸ್ಥರು ಮಾಜಿ ಶಾಸಕರ ಗಮನಕ್ಕೆ ತಂದ ಸಂದರ್ಭದಲ್ಲಿ, ಸರಕಾರದ ಹಣವನ್ನು ಉಪಯೋಗಿ ಈಗಾಗಲೇ ನಿರ್ಮಾಣಗೊಂಡು ಅರ್ಧಕ್ಕೆ ನಿಂತಿರುವ ಸರಕಾರಿ ಕಟ್ಟಡ ಸಂರಕ್ಷಣೆ ಮಾಡುವ ಮೂಲಕ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಸದುಪಯೋಗ ಆಗುವ ರೀತಿಯ ಜಾಗ ಮತ್ತು ಕಟ್ಟಡಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯ ಕಡತ ಸಂಗ್ರಹ ಮಾಡಿ ಇತರರ ಪಾಲಾಗಲು ಅವಕಾಶ ಕಲ್ಪಿಸಬಾರದು. ಸರಕಾರಿ ‌ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದರೂ ಸಹ ಅವುಗಳ ಬಗ್ಗೆ ಅಧಿಕಾರಿಗಳ ಜಾಗೃತರಾಗಿ ಸಂಬಂಧಿಸಿದ ದಾಖಲೆಗಳನ್ನು ನೀಡಿ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಸುದ್ಧಿಗಾರರಿಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!