ಕುಶಾಲನಗರ, ಡಿ 21: ನಂಜರಾಯಪಟ್ಟಣ ಗ್ರಾಪಂ ನಿಧಿಯಿಂದ ರೂ 1.50 ಲಕ್ಷ ವೆಚ್ಚದಲ್ಲಿ ಗ್ರಾಮದ ಮದರಸ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಅಂತಿಮ ಹಂತದ ಕಾಮಗಾರಿಯನ್ನು ಗ್ರಾಪಂ ಜನಪ್ರತಿನಿಧಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸಮೀರ, ಜಾಜಿ ತಮ್ಮಯ್ಯ, ಗಿರಿಜಾ, ಮದರಸ ಕಮಿಟಿ ಅಧ್ಯಕ್ಷ ಅಮೀರ್,ಮದರಸ ಧರ್ಮಗುರು ಇದ್ದರು.