ಆರೋಗ್ಯ
ಕೋವಿಡ್ ರೂಪಾಂತರಿ: ಮಾಸ್ಕ್ ಧರಿಸಿ ಎಚ್ಚರವಹಿಸಲು ಸಚಿವರ ಸೂಚನೆ

ಕುಶಾಲನಗರ, ಡಿ 17: ಕೋವಿಡ್ ರೂಪಾಂತರಿ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ಕ್ರಮ
ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ
ವಯೋವೃದ್ದರು, ಆರೋಗ್ಯ ಸಂಬಂಧಿ ಸಮಸ್ಯೆಯಿರುವವರು ಮಾಸ್ಕ್ ಧರಿಸುವುದು ಉತ್ತಮ
ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ.
ಕೋವಿಡ್ ರೂಪಾಂತರಿ ಸಂಬಂಧ ಅಗತ್ಯ ತಪಾಸಣೆಗಳ ಮೂಲಕ ನಿಗಾವಹಿಸಲಾಗುವುದು.
ತಪಾಸಣೆ ಕಾರ್ಯಗಳನ್ನು ಹೆಚ್ಚು ಕೈಗೊಳ್ಳುವ ಮೂಲಕ ಮಾನಿಟರ್ ಮಾಡಲಾಗುವುದು.
ಜಿಲ್ಲೆ, ತಾಲೂಕು, ಗ್ರಾಮಾಂತರ ಆಸ್ಪತ್ರೆಗಳು ಸಜ್ಜಾಗಲು ಸೂಚಿಸಲಾಗಿದೆ.
ಕೋವಿಡ್ ನಿರ್ವಹಣೆ ಸಂಬಂಧ ತಜ್ಞರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಲಾಗಿದೆ.
ರಾಜ್ಯ ಸರಕಾರ ಕೂಡ ಶೀಘ್ರದಲ್ಲೇ ಈ ಸಂಬಂಧ ಸಭೆ ನಡೆಸಿ ಅಗತ್ಯ ಮಾರ್ಗಸೂಚಿ ಹೊರಡಿಸಲಿದೆ



