ಕುಶಾಲನಗರ, ನ 08: ಹನಿಟ್ರಾಪ್ ನಿಂದ ರೋಸಿಹೋಗಿ ಡೆತ್ ನೋಟ್ ಬರೆದಿಟ್ಟು ಮಂಗಳವಾರದಿಂದ ಕಾಣೆಯಾಗಿದ್ದ ಮಡಿಕೇರಿಯ ಯೋಧ ಸಂದೇಶ್ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ. ಸಂದೇಶ್ ಕಣ್ಮರೆಯಾಗಿ 30 ಗಂಟೆ ಬಳಿಕ ಬುಧವಾರ ರಾತ್ರಿ 8.20 ರ ಸುಮಾರಿಗೆ 40 ಆಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ.
ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದ ಪ್ರಯತ್ನದಿಂದ ಪ್ರಕರಣ ಅಂತ್ಯ ಕಂಡಿದೆ.
ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ಜೀವಿತ ಮತ್ತು ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾಟ್೯ ಮಾಲೀಕ ಸತ್ಯ ವಿರುದ್ದ ಸಂದೇಶ್ ಪತ್ನಿ ದೂರಿನ ಆಧಾರದ ಮೇರೆಗೆ ಸದ್ಯದಲ್ಲಿಯೇ ಕ್ರಮ ಜರುಗುವ ಸಾಧ್ಯತೆಯಿದೆ.
Back to top button
error: Content is protected !!