ಕುಶಾಲನಗರ. ಅ:02. ಕುಶಾಲನಗರದ. ಸಿ.ಎಸ್. ಐ ಮೇಡಕ್ ಮೆಮೋರಿಯಲ್ ಚರ್ಚ್ ಇವರ ಆಶ್ರಯದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹಾಗೂ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀಣಾ ಅಚಯ್ಯರವರು ನಮ್ಮದು ಜಾತ್ಯಾತೀತ ನಿಲುವು ಇರುವ ಒಂದು ಪಕ್ಷ.. ನಮ್ಮನ್ನು ಆರಿಸಿದ ಮೇಲೆ ನಾವು ಪ್ರಾಮಾಣಿಕವಾಗಿ ಜನರ ಸೇವೆ ಮಾಡೋದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಮುಂದೆ ಇರುವ ಶಾಸಕ ಮಂತರ್ ಗೌಡರವರು ಕೂಡ ಉತ್ತಮ ಕೆಲಸ ನಿರ್ವಹಿಸ್ತಾರೆ ಎನ್ನುವ ನಂಬಿಕೆ ನಮಗಿದೆ. ಎಂದು ಭರವಸೆ ನೀಡಿದರು ಶಾಸಕ ಮಂತರ್ ಗೌಡರವರು ಮಾತನಾಡಿ. ಅಭಿವೃದ್ಧಿ ಮಾಡುವುದರ ಮೂಲಕ ನಿಮ್ಮ ಮನಸ್ಸು ಗೆಲ್ಲುವ ಪ್ರಯತ್ನ ಕೂಡ ನಾನು ಮಾಡುತ್ತೇನೆ. ಕೇವಲ ಸರ್ಕಾರದ ಕೆಲಸಗಳನ್ನು ಮಾತ್ರ ಅಲ್ಲ ನನ್ನ ವಯಕ್ತಿಕವಾಗಿಯೂ ನಿಮ್ಮ ಬಳಿ ನಾನು ಯಾವಾಗಲೂ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ ವಿಪಿ ಶಶಿಧರ್. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ. ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿರಣ್. ನಗರ ಉಪಾಧ್ಯಕ್ಷ ಶಿವಶಂಕರ್. ಸಾಜಿ. ಕಾರ್ಯಕ್ರಮ ಆಯೋಜಕರಾದ ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರು ಹಾಜರಿದ್ದರು
Back to top button
error: Content is protected !!