ಸಭೆ

ಕೂಡುಮಂಗಳೂರು ಸಹಕಾರ ಸಂಘದ ಮಾಸಿಕ ಸಭೆ.

ಕುಶಾಲನಗರ ಸೆ 26 : ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಕೆ, ಕೆ, ಹೇಮಂತ್ ಕುಮಾರ್ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಸಭೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 2 ಕೋಟಿ ವೆಚ್ಚದ ಸಮುದಾಯ ಭವನದ ಮುಂದಿನ ಕಾರ್ಯಸೂಚಿಯ ಅನುಸಾರವಾಗಿ ವಿವಿಧ ಸಲಹೆ ಸೂಚನೆಗಳು ನಡೆದವು. ಕಳೆದ 5 ವರ್ಷಗಳ ಅಡಳಿತ ಅವಧಿಯಲ್ಲಿ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡುವ, ಮತ್ತು ಮರುಪಾವತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಸಭೆಯ ಅಧ್ಯಕ್ಷೆ ವಹಿಸಿದ ಅಧ್ಯಕ್ಷ ಕೆ ಕೆ ಹೇಮಂತ್ ಕುಮಾರ್ ಮಾತಾಡುತ್ತಾ ಆಡಳಿತ ಮಂಡಳಿಯ ಸಹಕಾರ, ಸದಸ್ಯ ರೈತರ ಸಹಕಾರದೊಂದಿಗೆ ಉತ್ತಮ ವ್ಯಾಪಾರ, ವ್ಯವಹಾರ ಸಾಲ ನೀಡುವಿಕೆ ಮತ್ತು ಸದಸ್ಯರ ಸಂಖ್ಯೆ ಹೆಚ್ಚಿಸುವಿಕೆ, ಸೇರಿದಂತೆ ವಿವಿಧ ವಾರ್ಷಿಕ ಆದಾಯದ ಅನುಗುಣದ ಮಾನದಂಡಗಳ ಮೇಲೆ ಸಂಘಕ್ಕೆ ಈ ಬಾರಿ ಸೋಮವಾರಪೇಟೆ ತಾಲ್ಲೂಕಿನ ಪ್ರಾಥಮಿಕ ಸಹಕಾರದ ಮಟ್ಟದ ಪ್ರಥಮ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಪಡೆಯಾಗಿದೆ ಮುಂದಿನ ದಿನಗಳಲ್ಲಿ ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿ ಅಭಿವೃದ್ಧಿ ತಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ, ಪಿ, ಹಮೀದ್, ನಿರ್ದೇಶಕರಾದ ಕೆ, ಟಿ, ಅರುಣ್ ಕುಮಾರ್, ತಮಣೆಗೌಡ, ಕೃಷ್ಣಗೌಡ, ಪಾರ್ವತಮ್ಮ, ವಿ, ಬಸಪ್ಪ ನಾಗರಾಜ್, ರಮೇಶ್, ಕುಮಾರ್, ಪ್ರವಿತ್ರ, ಆರ್, ಕೆ ನಾಗೇಂದ್ರ ಬಾಬು, ಡಿ, ಎನ್, ಚಂದ್ರಶೇಖರ್, ಮುಖ್ಯ ಜನನ ಕಾರ್ಯನಿರ್ವಹಣಾಧಿಕಾರಿ ಎಂ, ಪಿ, ಮೀನ,ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!