ಕಾರ್ಯಕ್ರಮ

ಕರಿಯಪ್ಪ ಬಡಾವಣೆಯಲ್ಲಿ ವೈವಿಧ್ಯಮಯ ಗಣೇಶೋತ್ಸವ: ಗಮನ ಸೆಳೆದ ಸ್ಪರ್ಧಾ ಕಾರ್ಯಕ್ರಮ

ಕುಶಾಲನಗರ, ಸೆ 24: ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿಗಳ ಟ್ರಸ್ಟ್ ವತಿಯಿಂದ ಬಡಾವಣೆಯಲ್ಲಿ 26 ನೇ ವರ್ಷದ ಅದ್ದೂರಿ ಗಣೇಶೋತ್ಸವ ನಡೆಯುತ್ತಿದ್ದು ಭಾನುವಾರ ಸಂಜೆ ಗಣಪತಿ‌ ವಿಸರ್ಜನೆ ಕಾರ್ಯಕ್ರಮ ನಡೆಯಿತು.

ಬಡಾವಣೆ ಸಭಾಂಗಣದಲ್ಲಿ ಗಣಪತಿ ಪ್ರತಿಷ್ಠಾಪಿಸಿದ್ದು ದಿನನಿತ್ಯ ಸಂಜೆ ಸಮಯದಲ್ಲಿ ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ಹೊರಗಿನ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯುತ್ತಿದ್ದು ಕರಾಟೆ, ಯೋಗ, ಹಾಡುಗಾರಿಕೆ, ನೃತ್ಯ ಪ್ರದರ್ಶನಗಳು ಗಮನ ಸೆಳೆದಿವೆ.

ಭಾನುವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.‌ ಜಾತಿ, ಮತ ಬೇಧ ಹೊರತುಪಡಿಸಿ ಎಲ್ಲರೂ ಒಗ್ಗೂಡಿ ಬಡಾವಣೆಯಲ್ಲಿ ಗಣೇಶೋತ್ಸವ ಆಚರಣೆಗೆ ಕೈಜೋಡಿಸಿರುವುದು‌ ಎಲ್ಲರಿಗೂ ಮಾದರಿ ಎಂದು ಬಡಾವಣೆ ಸಮಿತಿ ಕಾರ್ಯದರ್ಶಿ ನಂದೀಶ್ ತಿಳಿಸಿದರು.

ಈ ಸಂದರ್ಭ ಟ್ರಸ್ಟ್ ಪ್ರಮುಖರಾದ ಹನುಮರಾಜ್, ಎಂ.ಕೆ.ಸುಂದರೇಶ್, ಮಂಜುನಾಥ್ ಕುಮಾರ್, ಕಿರಣ್ ಕುಮಾರ್ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!