ಕುಶಾಲನಗರ, ಸೆ 25: ಹೆಬ್ಬಾಲೆ ಗ್ರಾಪಂ ಮಾಸಿಕ ಸಭೆ ಪಂಚಾಯ್ತಿ ಅರುಣ ಕುಮಾರಿ ಅಧ್ಯಕ್ಷೆ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ, ಗ್ರಾಪಂ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ, ಸ್ವಚ್ಚತೆಗೆ, ಕುಡಿವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯಿತು.
ಸಾರ್ವಜನಿಕರ ಅರ್ಜಿಗಳ ಬಗ್ಗೆ ಪಿಡಿಒ ಅರುಣ ಭಾಸ್ಕರ್ ಸಭೆಯ ಗಮನಕ್ಕೆ ತಂದರು.
ಸಭಾತ್ಯಾಗ: ಸಭೆಯ ಆರಂಭಗೊಳ್ಳುತ್ತಿದ್ದಂತೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ್ ನೇತೃತ್ವದಲ್ಲಿ ಸದಸ್ಯರಾದ ನಾರಾಯಣ, ತನುಕುಮಾರ್, ರತ್ನಮ್ಮ, ಮಹದೇವ, ಪುಟ್ಟಲಕ್ಷ್ಮಿ ಸಭಾತ್ಯಾಗ ಮಾಡಿದರು.
ಅಧ್ಯಕ್ಷರು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಮನಬಂದಂತೆ ವರ್ತನೆ ಮಾಡುತ್ತಿದ್ದು ಟೆಂಡರ್ ಕರೆಯದೆ ಬಲ್ಬ್ ಖರೀದಿ ಮಾಡಲಾಗಿದೆ, ಕಾಮಗಾರಿಗಳ ಬಗ್ಗೆ ಗಮನಕ್ಕೆ ತರುತ್ತಿಲ್ಲ, ಗ್ರಾಪಂ ಗೆ ಸೇರಿದ ಜಾಗ ಉಳಿಸಿಕೊಳ್ಳಲು ಕ್ರಮವಹಿಸಿಲ್ಲ, ಸ್ವಚ್ಚತಾ ಕಾರ್ಯ ಕಾಮಗಾರಿಗೆ ಜಮಾ ಖರ್ಚು ವಿವರದಲ್ಲಿ ಎರೆಡೆರೆಡು ಬಾರಿ ಉಲ್ಲೇಖಿಸಲಾಗಿದೆ, ಈ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದನ್ನು ಪರಿಣನೆಗೆ ತೆಗೆದುಕೊಳ್ಳದೆ ಉದ್ದಟತನದಿಂದ ವರ್ತಿಸುತ್ತಾರೆ ಎಂದು ಮಂಜುನಾಥ್ ಆರೋಪಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಅರುಣಕುಮಾರಿ, ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುವ ಮುನ್ನವೇ ಏಕಾಏಕಿ ಸಭಾತ್ಯಾಗ ಮಾಡಿದ್ದಾರೆ. ಮನವೊಲಿಕೆಗೆ ಸ್ಪಂದಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಅವರ ಆರೋಪಗಳಲ್ಲಿ ಹುರುಳಿದ್ದರೆ ಯಾವುದೇ ರೀತಿಯ ತನಿಖೆಗೆ ಸಿದ್ದವಿರುವುದಾಗಿ ತಿಳಿಸಿದರು.
Back to top button
error: Content is protected !!