ಕುಶಾಲನಗರ, ಸೆ 21: ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ವಿಸರ್ಜನೆ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ನೆರವೇರಿತು.
ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗುರುವಾರ ಮಧ್ಯಾಹ್ನ ನೆರೆದಿದ್ದ ನೂರಾರು ಮಂದಿಗೆ ಅನ್ನದಾನ ನಡೆಸಿದ ಬಳಿಕ ತೆರೆದ ಮಂಟಪದಲ್ಲಿ ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಹಾರಂಗಿ ಕಾಲುವೆಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭ ವಿನಾಯಕ ಗೆಳೆಯ ರ ಬಳಗ ದ ಅಧ್ಯಕ್ಷರಾದ ಕೃಷ್ಣ, ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ವನವಾಸಿ ಕಲ್ಯಾಣ ದ ತಾಲ್ಲೂಕು ಅಧ್ಯಕ್ಷ ಸಿದ್ದಣ್ಣ, ತಾಲ್ಲೂಕು ಕಾರ್ಯದರ್ಶಿ ಹರ್ಷ ಎಂ. ಬಿ. ಖಜಾಂಚಿ ಅನಿಶ್, ಆರ್ ಎಸ್ ಎಸ್ ನ ತಾಲ್ಲೂಕು ಕಾರ್ಯವಾಹಕ ರಮೇಶ್ ಬೊಟ್ಟುಮನೆ, ತಾಲ್ಲೂಕು ಸೇವಾ ಪ್ರಮುಖ ಮುರುಳೀಧರ್, ಹಿಂದೂ ಜಾಗರಣ ವೇದಿಕೆಯ ಪ್ರವೀಣ್,ಗ್ರಾಮಸ್ಥರಾದ ಮುತ್ತಣ್ಣ, ಬಸವ, ಕಾಳ, ರವಿ, ಸಿದ್ದ, ಮಂಜೇಶ್, ಸುಬ್ರಮಣಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Back to top button
error: Content is protected !!