ಕುಶಾಲನಗರ, ಸೆ ೧೫: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರದ ಸ್ಮಶಾನವನ್ನು ಸ್ವಚ್ಚಗೊಳಿಸಲಾಯಿತು.
ಮಳೆಗಾಲದಲ್ಲಿ ಬೆಳೆದು ನಿಂತಿದ್ದ ಗಿಡ ಗಂಟೆಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.
ಸ್ಥಳೀಯ ವಾರ್ಡ್ ಸದಸ್ಯರ ಹಾಗೂ ಪಿಡಿಓ ಸಂತೋಷ್ ಅವರ ಆಸಕ್ತಿಯ ಮೇರೆಗೆ ಎಸ್.ಎಲ್.ಎನ್ ಸಂಸ್ಥೆಯ ವತಿಯಿಂದ ಸ್ಮಶಾನ ವನ್ನು ಸಚ್ಚಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ಹಿನ್ನಲೆ ಎಸ್.ಎಲ್.ಎನ್ ಸಂಸ್ಥೆಯವರ ಬಳಿ ಸ್ವಚ್ಚಗೊಳಿಸುವಂತೆ ಕೋರಿಕೊಂಡಾಗ, ಅವರು ಒಪ್ಪಿಗೆ ಸೂಚಿಸಿ ಸ್ಮಶಾನ ಸ್ವಚ್ಚಗೊಳಿಸಲು ಸಹಕರಿಸಿದ್ದಾರೆ. ಊರಿನ ಅಭಿವೃದ್ಧಿ ವಿಷಯಗಳಿಗೆ ಮುಂದೆಯೂ ಇದೇ ರೀತಿ ಸಹಕಾರವಿರಲಿ ಎಂದರು.
ಈ ಸಂದರ್ಭ ಸ್ಥಳೀಯರಾದ ಆಶಾ ವೆಂಕಟೇಶ್, ಮಂಜು, ಮಾರಿ, ರೋಷನ್, ವಿನೀತ್ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!