ಕುಶಾಲನಗರ ಸೆ 14: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕುಶಾಲನಗರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಟಿಕೊಪ್ಪದ ವತಿಯಿಂದ ಕೂರ್ಗ್ ಜಂಗಲ್ ಕ್ಯಾಂಪ್ ರೆಸಾರ್ಟ್ ಹೇರೂರಿನಲ್ಲಿ ಸಿಬ್ಬಂದಿ ವರ್ಗದವರಿಗೆ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತನಿಧಿ ಘಟಕದ ಡಾಕ್ಟರ್ ಕರುಂಬಯ್ಯ, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಹೆಚ್.ಕೆ.ಶಾಂತಿ ಮತ್ತು ರಕ್ತ ನಿಧಿ ಘಟಕದ ತಂಡದವರು ಪಾಲ್ಗೊಂಡಿದ್ದರು. ರೆಸಾರ್ಟ್ ಮಾಲೀಕರಾದ ಮಂಜುನಾಥ್, ಮೆನೇಜರ್ ಮದನ್ ಶಿಬಿರದಲ್ಲಿ ಪಾಲ್ಗೊಂಡು ಇನ್ನು ಮುಂದಿನ ದಿನಗಳಲ್ಲೂ ಪರಂಪರಾ ರೆಸಾರ್ಟ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು.
Back to top button
error: Content is protected !!