ಕಾರ್ಯಕ್ರಮ

ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಕುಶಾಲನಗರ ಸೆ 12: ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಸಾಲಿನ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ ವಿಸ್ಮಯಿ ಚಕ್ರವರ್ತಿ ನೆರವೇರಿಸಿದರು. ನಂತರ ಮಾತಾಡಿದ ಅವರು, ಗ್ರಾಮಾಂತರ ಪ್ರದೇಶಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು ಹೆಚ್ಚು ಸಹಾಯಕವಾಗುತ್ತಿವೆ ಎಂದರು.
ಈ ಸಂದರ್ಭ ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವುಕುಮಾರ್, ತರಬೇತುದಾರರಾದ ವೆಂಕಟೇಶ್, ಮಂಜುನಾಥ್, ದಿನಮಣಿ, ಸುರೇಶ್, ನಿವೃತ್ತ ಅಥ್ಲೆಟಿಕ್ಸ್ ತರಬೇತುದಾರ ಅಂತೋಣಿ ಡಿಸೋಜ, ಶಿಕ್ಷಕರಾದ ಪ್ರೇಮಥ್ ನಾಥ್, ಮುರುಳಿ, ಅಕ್ಷಿತಾ, ಮಧುರಾ, ರಂಜನಿ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳೆಯರ ಗುಂಪು ಪಂದ್ಯಾಟಗಳುಹಾಗೂ ಅಥ್ಲೆಟಿಕ್ ಪಂದ್ಯಾಟಗಳು ಸೇರಿದಂತೆ ವಿವಿಧ ಬಗೆಯ ಕ್ರೀಡೆಗಳು ಕ್ರೀಡಾ ಶಾಲಾ ಕ್ರೀಡಾಂಗಣದಲ್ಲಿ ನಡೆದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!