ಕ್ರೈಂ

ತೀವ್ರ ಹಲ್ಲೆಗೆ ಒಳಗಾದ ಕಾಲೇಜು ವಿದ್ಯಾರ್ಥಿ ಸಾವು

ಸ್ನೇಹಿತೆಯ ಮನೆಗೆ ತೆರಳಿದ್ದ ಸಂದರ್ಭ ಘಟನೆ

ಕುಶಾಲನಗರ, ಸೆ 08: ವ್ಯಕ್ತಿಯೋರ್ವನ ಹಲ್ಲೆಯಿಂದ ತೀವ್ರವಾಗಿ ಘಾಸಿಗೊಂಡಿದ್ದ ಕಾಲೇಜು ವಿದ್ಯಾರ್ಥಿ ಓರ್ವ ಮೃತಪಟ್ಟ ಘಟನೆ ವಿರಾಜಪೇಟೆಯ ಕಾವಡಿಯಲ್ಲಿ ನಡೆದಿದೆ.

ಸ್ನೇಹಿತೆಯ ಮನೆಗೆ ತೆರಳಿದ್ದ ದಿವಿನ್ ಎಂಬಾತನ‌ ಮೇಲೆ ಸ್ನೇಹಿತೆಯ ತಂದೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಘಾಸಿಗೊಂಡ ದಿವಿನ್ ಮೃತಪಟ್ಟಿದ್ದು ಹಲ್ಲೆ ನಡೆಸಿದ ಆರೋಪಿ ರಮೇಶ್ ಪೊಲೀಸರಿಗೆ ಶರಣಾಗಿದ್ದಾನೆ.

ಅಜ್ಜಿ ಮನೆ‌ ಪಕ್ಕದ ಮನೆ ಸ್ನೇಹಿತೆ ನೇತಾಜಿ ಶಾಲಾ ವಿದ್ಯಾರ್ಥಿನಿ ಮನೆಗೆ ದಿವಿನ್ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದ್ದು ಬಾಲಕಿ ಪೋಷಕರು ಮನೆಗೆ ಆಹ್ವಾನಿಸಿ ಈ ಕೃತ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮೃತ ದಿವಿನ್ ಚಾಣಕ್ಯ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!