ಕಾರ್ಯಕ್ರಮ

ಕುಶಾಲನಗರ ಆಟೋ ಚಾಲಕರು ಮಾಲೀಕರ ಸಂಘದ ನಿರ್ದೇಶಕರಿಗೆ ಪ್ರಮಾಣ ವಚನ

ಕುಶಾಲನಗರ, ಜು 11: ಇತ್ತೀಚೆಗೆ ಕುಶಾಲನಗರ ಆಟೋ ಚಾಲಕರು‌ ಮಾಲೀಕರ ಸಂಘದ‌ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರಿಗೆ ಪ್ರಮಾಣ ವಚನ‌ ಬೋಧಿಸಿ ಪ್ರಮಾಣ ಪತ್ರ ವಿತರಿಸಲಾಯಿತು.

9 ಮಂದಿ ಪೈಕಿ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೆ.ಟಿ.ಯೋಗೇಶ್ ಅವರ ತಂಡದ ದೇವರಾಜ್ ಜವರ. ಗಣೇಶ್‌ ಹಾಗೂ ಬಾಂಡ್ ಪ್ರಸನ್ನ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭ‌ ಮಾಜಿ ಅಧ್ಯಕ್ಷ‌ ಮೋಹನ್, ಕಾರ್ಯದರ್ಶಿ ಮಂಜು, ಸಹ ಕಾರ್ಯದರ್ಶಿ ಕೆ.ಜಿ.ಕೃಷ್ಣ, ಸ್ಥಳದಾನಿ ತೇಜಸ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!