ಅರಣ್ಯ ವನ್ಯಜೀವಿ

ಹೆರೂರಿನಲ್ಲಿ‌ ಕಾಡಾನೆ ಹಾವಳಿ: ನಿಯಂತ್ರಣಕ್ಕೆ ಗ್ರಾಮಸ್ಥರ ಒತ್ತಾಯ

ಕುಶಾಲನಗರ, ಜು‌ 08:ಸುಂಟಿಕೊಪ್ಪ ಹೋಬಳಿಯ ಹೇರೂರು ಗ್ರಾಮದ ರೈತ ಅರುಣ್ ಚೆಂಗಪ್ಪ ಅವರ ತೋಟಕ್ಕೆ ನಿತ್ಯ ಕಾಡಾನೆಗಳು ಲಗ್ಗೆಯಿಡುತ್ತಿವೆ.  ಕಾಡಾನೆಗಳು ಕಾಫಿ, ಬಾಳೆ, ಅಡಿಕೆ ಫಸಲು ನಾಶ ಮಾಡುತ್ತಿವೆ. ಮಳೆ ಬಾರದೇ ರೈತನಿಗೆ ಕಷ್ಟಕರವಾಗಿದ್ದು ಜೊತೆಗೆ ಆನೆ ಸಂಘರ್ಷ ಮಿತಿಮೀರಿದೆ. ಕೊಡಲೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಅಳಲು ತೋಡಿಕೊಂಡಿದ್ದಾರೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಿಗೂ ತೊಂದರೆ ಆಗುತ್ತಿದ್ದು ಮನೆ ಬಾಗಿಲಿಗೆ ಕಾಡಾನೆಗಳು‌ ಲಗ್ಗೆಯಿಡುತ್ತಿರುವ‌ ಕಾರಣ ಶಾಲೆ ಮಕ್ಕಳೂ ಭಯಭೀತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!