ಕುಶಾಲನಗರ, ಜೂ 08: ಕುಶಾಲನಗರ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್ ಇಂದಿರಾ ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಖಾಸಗಿ ಬಡಾವಣೆ ನಿರ್ಮಾಣ ಸಂಬಂಧ ಚರಂಡಿ ತಳಭಾಗ ಸಡಿಲಗೊಂಡು ಹಾನಿಯಾಗಿ ಚರಂಡಿ ನೀರು ಚರಂಡಿ ಪಕ್ಕದಲ್ಲಿ ಶೇಖರಣೆಗೊಳ್ಳುತ್ತಿದೆ. ಕ್ರಮೇಣ ಇಲ್ಲಿ ಎಮ್ಮೆಗಳ ಆವಾಸ ಸ್ಥಾನವಾಗಿ ಬೃಹತ್ ಹೊಂಡವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಸಮೀಪದ ಮನೆಗಳಿಗೆ ತೀವ್ರ ಅನಾನುಕೂಲ ಉಂಟಾಗಿದ್ದು ನೊಣ, ಸೊಳ್ಳಗಳ ಕಾಟ ಹಾಗೂ ಸಹಿಸಲಸಾಧ್ಯ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಕಳೆದ ಮೂರು ವರ್ಷದಿಂದ ಸ್ಥಳೀಯ ಆಡಳಿತ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಸ್ಥಳೀಯ ನಿವಾಸಿ ಎಸ್.ಆದಂ ಆರೋಪಿಸಿದ್ದಾರೆ.
ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಪುರಸಭೆ ಮುಂಭಾಗ ಏಕಾಂಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
Back to top button
error: Content is protected !!