ಕ್ರೈಂ
ಕಳ್ಳಭಟ್ಟಿ ತಯಾರಿಕೆ: ಅಬಕಾರಿ ಅಧಿಕಾರಿಗಳ ದಾಳಿ
ಕುಶಾಲನಗರ, ಏ 03: ಸೋಮವಾರಪೇಟೆ ತಾಲ್ಲೂಕು, ಚನ್ನಪುರ ಗ್ರಾಮದ ನಿವಾಸಿಯಾದ ಚಂದ್ರಶೇಖರ್ ಬಿನ್ ಲೇಟ್ ನಂಜುಂಡಶೆಟ್ಟಿ ಎಂಬ ವ್ಯಕ್ತಿಯ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಹೊಂದಿದ್ದ 300 ಲೀ. ಬೆಲ್ಲದ ಪುಳಗಂಜಿ ಮತ್ತು ಪರಿಕರಗಳನ್ನು ಹಾಗೂ 10 ಲೀ. ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು ಚಂದ್ರಶೇಖರ್ ಬಿನ್ ಲೇಟ್ ನಂಜುಂಡಶೆಟ್ಟಿ ಎಂಬುವವರ ಮೇಲೆ ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆರ್.ಎಂ ಚೈತ್ರಾ, ರವರು ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ಸದರಿ ಕಾರ್ಯಾಚರಣೆಯಲ್ಲಿ ಅಬಕಾರಿ ಪೇದೆಗಳಾದ ಎ.ಪಿ ವೀರೇಶ್ ಕುಮಾರ್, ಮಹಾದೇವ ಗಡ್ಡಿ, ಹಾಗೂ ಕಾಂತರಾಜ್ ರವರುಗಳು ಹಾಜರಿದ್ದರು.