ಕ್ರೈಂ

ಮಾದಕ ವಸ್ತು‌ ಮಾರಾಟ: ಮೂವರ ಬಂಧನ

ಕುಶಾಲನಗರ, ಮಾ 30 ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಕೂಡಿಗೆ ಸೇತುವೆ ಬಳಿ ಮಾದಕ ವಸ್ತು‌ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ‌ ಮೇರೆಗೆ ದಾಳಿ‌ ನಡೆಸಿದ ಪೊಲೀಸರ ತಂಡ ಕುಶಾಲನಗರದ ಎಚ್.ಅಕ್ಬರ್, ಕೇರಳ‌ ಮೂಲದ ಮಹಮದ್ ರಾಫಿ, ಟಿ.ಕೆ.ರಿಷಿಕುಮಾರ್ ಎಂಬವರನ್ನು‌ ಬಂಧಿಸಿ ಅವರ ಬಳಿಯಿದ್ದ 13 ಗ್ರಾಂ‌ ಗಾಂಜಾ, 41 ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್, ಎರಡು ಮೊಬೈಲ್, 9.500 ನಗದು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ‌ ನಿರೀಕ್ಷಕ ಬಿ.ಜಿ.ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ದಿನೇಶ್‌ಕುಮಾರ್ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!