ಪ್ರಕಟಣೆ

ಜಾನುವಾರುಗಳನ್ನು ರಸ್ತೆಗೆ ಬಿಟ್ಟರೆ ಎಚ್ಚರ: ದೂರು ದಾಖಲಿಸಲು ಮುಂದಾದ ಮುಳ್ಳುಸೋಗೆ ಗ್ರಾಪಂ

ಕುಶಾಲನಗರ, ನ 03: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಸೋಗೆ ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಸಾರ್ವಜನಿಕರು ತಮ್ಮ ಮನೆಯಲ್ಲಿ ಹೈನುಗಾರಿಕೆಯನ್ನು ಮಾಡುತ್ತಿರುವುದು ಸರಿಯಷ್ಟೇ ಆದರೆ ತಾವು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಆವರಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಕಬೇಕಾಗಿರುತ್ತದೆ. ಆದರೆ ಕಾವು ತಮ್ಮ ದನಕರುಗಳನ್ನು ಯಾವುದೇ ಮೇಲ್ವಿಚಾರಣೆ ಇಲ್ಲದೆ ರಾಜ್ಯ ಹೆದ್ದಾರಿ ಸೇರಿದಂತೆ ಸಾರ್ವಜನಿಕ ರಸ್ತೆಗಳಲ್ಲಿ ಬಿಡುತ್ತಿರುವುದು ಕಂಡುಬಂದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಅನಾನುಕೂಲ ವಾಗುತ್ತಿದ್ದು, ಹಲವು ಬಾರಿ ವಾಹನಗಳು ಅಪಘಾತಕ್ಕೆ ಒಳಪಟ್ಟು ಸಾರ್ವಜನಿಕರಿಗೆ ಹಾಗೂ ದನಕರುಗಳಿಗೆ ಹಾನಿಯಾಗಿರುತ್ತದೆ, ಆದುದ್ದರಿಂದ ತಾವು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಈ ತಕ್ಷಣವೆ ತಮ್ಮ ದನಕರುಗಳನ್ನು ಸಾರ್ವಜನಿಕ ರಸ್ತೆಯಿಂದ ತಮ್ಮ ಖಾಸಗಿ ಆಸ್ತಿಯಲ್ಲಿ ಸಾಕಲು ವ್ಯವಸ್ಥೆ ಮಾಡಿಕೊಳ್ಳುವುದು. ಒಂದು ವೇಳೆ ಈ ಸೂಚನೆಯನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿ, ದನಕರುಗಳಿಂದ ಸಾರ್ವಜನಿಕರಿಗೆ ಯಾವುದೇ ತರಹದ ಅಪಘಾತಗಳುಂಟಾಗಿ ಹಾನಿಯಾದಲ್ಲಿ ತಮ್ಮನ್ನು ನೇರ ಹೊಣೆಗಾರರನ್ನಾಗಿ ತಮ್ಮ ಮೇಲೆ ದೂರು ದಾಖಲಿಸಲಾಗುವುದು. ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೊಳಪಟ್ಟು ನಿಮ್ಮ ಮೇಲೆ ಸೂಕ್ತ ಕ್ರಮಕೈಗೊಳ್ಳುವುದು ಎಂದು ಈ ಮೂಲಕ ತಿಳಿಯಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!