ಕುಶಾಲನಗರ ಅ 08: ಕಾಂಗ್ರೇಸ್ ನ ಪ್ರಜ್ಞೆ ತಪ್ಪಿದ ಗುಂಪೊಂದು ಕಾಂಗ್ರೇಸ್ ನವರು ನಾವು ಎಂಬುದನ್ನು ಹೇಳಿಕೊಳ್ಳಲಾಗದೆ ತಮ್ಮನ್ನು ತಾವು ಪ್ರಜ್ಞಾವಂತರು ಎಂದು ಹೇಳಿಕೊಂಡು ಹೋರಾಟಕಿಳಿದಿರುವುದು ಹಾಸ್ಯಾಸ್ಪದ. ಕಾಂಗ್ರೇಸ್ ನ ಬಿ ಟೀಮ್ ಇದಾಗಿದ್ದು ಇದರ ನೇತ್ರತ್ವವನ್ನು ವಿ.ಪಿ ಶಶಿಧರ್ ರವರೆ ಕಾಯ್ದುಕೊಂಡಿರುವುದನ್ನು ಗಮನಿಸಿದರೆ ಪ್ರಜ್ಞಾವಂತರ ಪರಿಸ್ಥಿತಿ ಆರ್ಥವಾಗುತ್ತದೆ. ಇದು ವಿ.ಪಿಶಶಿಧರ್ ರವರ ಬೆಂಬಲಿಗರ ವೇದಿಕೆಯಾಗಿದ್ದು ಇದು ಕಾಂಗ್ರೇಸ್ ನ ಮತ್ತೊಂದು ಗುಂಪಾಗಿದ್ದು ಇವರಿಗೆ ಬಿಜೆಪಿಯ ಮೋರ್ಚಗಳ ಬಗ್ಗೆ ಟೀಕಿಸುವ ಯಾವ ನೈತಿಕತೆಯು ಇಲ್ಲ. ಮೊದಲು ಇವರು ಕಾಂಗ್ರೇಸ್ ನ ಯಾವ ಗುಂಪಿನ ಅಧ್ಯಕ್ಷರಾಗಿದ್ದಾರೆ ಹಾಗೂ ಊರಿನ ಎಲ್ಲಾ ಪ್ರಜ್ಞಾವಂತರ ನಾಯಕರು ತಾವು ಎಂದು ಬಿಂಬಿಸಲೊರಟವರಿಗೆ ಕಾಂಗ್ರೇಸ್ ನ ಕಾರ್ಯಕರ್ತರನ್ನೊರತು ಪಡಿಸಿ ಯಾರಿದ್ದರು ಇವರ ಪ್ರಜ್ಞಾವಂತರ ತಂಡದಲ್ಲಿ ಎಂದು ಹಿಂದೆ ತಿರುಗಿ ನೋಡುವುದೊಳಿತು. ಒಂದು ರಾಜಕೀಯ ಪಕ್ಷದ ಅಧ್ಯಕ್ಷನ ನೇತ್ರತ್ವದಲ್ಲಿ ಪ್ರಜ್ಞಾವಂತರೆಂದು ಹೋರಾಟಕ್ಕೆ ತೆರಳಿದವರ ಪ್ರಜ್ಞೆಯ ಮನೋಸ್ಥಿತಿ ಯಾವ ಮಟ್ಟದಲಿದೆ ಎಂದು ಆರ್ಥೈಸಲಾಗದಷ್ಟು ಮೂರ್ಖರು ಕುಶಾಲನಗರದಲಿಲ್ಲಾ. ರಾಜಕೀಯೇತರ ಹೋರಾಟದ ನೇತ್ರತ್ವ ಕಾಂಗ್ರೇಸ್ ಪಕ್ಷದ ಅಧ್ಯಕ್ಷರ ಕೈಯಲ್ಲಿ ಅದರರ್ಥ ಈ ಪ್ರಜ್ಞಾವಂತರ ತಂಡದಲ್ಲಿ ನಾಯಕತ್ವ ನಿಬಾಯಿಸುವ ಕೊರತೆ ಇದೆಯೇ ತಿಳಿಯಬೇಕಿದೆ ಎಂದು ಬಿಜೆಪಿ ವಕ್ತಾರ ಕೆ.ಜಿ.ಮನು ಆರೋಪಿಸಿದ್ದಾರೆ.
Back to top button
error: Content is protected !!