ಸಾಮಾಜಿಕ

ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದಿಂದ‌ ‘ಬಿಸಿಲಿಗೊಂದು ನೆರಳು’ ಕಾರ್ಯಕ್ರಮ

ಕುಶಾಲನಗರ, ನ 19: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ರಜ‌ತ ಮಹೋತ್ಸವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ ‘ಬಿಸಿಲಿಗೊಂದು ನೆರಳು’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಂಘದ ಆವರಣದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಅವರು ಸಾಂಕೇತಿಕವಾಗಿ ಕೊಡೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಂದಿ‌ನ ಕಾಂಕ್ರಿಟ್ ಯುಗದಲ್ಲಿ ನೆರಳೆಂಬ ವಿಚಾರ ವಿರಳವಾಗಿದೆ. ಮಾನವರು, ಪ್ರಾಣಿಪಕ್ಷಿಗಳು ಸೇರಿದಂತೆ ವಾಹನಗಳಿಗೂ ಕೂಡ ನೆರಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಘದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ವಿಚಾರ ಎಂದರು.
ಸಹಕಾರ
ಸಂಘದ ಅಧ್ಯಕ್ಷ ಬಿ.ಅಮೃತ್ ರಾಜ್ ಮಾತನಾಡಿ, ಸಂಘದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸದಸ್ಯರ ಕೊಡುಗೆ ಹಿನ್ನೆಲೆಯಲ್ಲಿ ಇಂದು ನಾವು ಸಂಘದ ಮೂಲಕ ಜನಸಾಮಾನ್ಯರಿಗೆ ನೆರವು ನೀಡುವ ಮಟ್ಟಕ್ಕೆ ಶಕ್ತಿ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಲಹಾ ಸಮಿತಿ ಸದಸ್ಯ
ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ರಜತ ಮಹೋತ್ಸವ ಹಿನ್ನೆಲೆಯಲ್ಲಿ 25 ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸಂಘ ಚಿಂತನೆ ಹರಿಸಿದೆ. ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಸದ್ಬಳಕೆ‌ ಮಾಡಿಕೊಳ್ಳಬೇಕಿದೆ ಎಂದರು.
ಸಂಘದ ನಿರ್ದೇಶಕಿ
ಚಿತ್ರ ಪಿ.ಆರ್.
ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಪಟ್ಟಣದ 35 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ ಮಾಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಮಂಜುನಾಥ್ ಪಿ.ಆರ್, ಸಲಹಾ ಸಮಿತಿ ಸದಸ್ಯರಾದ ವಾಣಿಶ್ರೀ, ಬಾಲಾಜಿ ಸೇರಿದಂತೆ ಸಂಘದ ನಿರ್ದೇಶಕರಾದ ನಟರಾಜ್ ಬಿ.ಆರ್, ವೈಶಾಖ್ ವಿ, ಶ್ರೀನಿವಾಸ್ ವಿ.ಆರ್, ಬಾಬು ಎನ್.ವಿ, ಗೌತಮ್ ಎಸ್.ಎಸ್, ಆದರ್ಶ್ ಎಸ್, ಅಂಜನ್ ಬಿ.ಎನ್, ಋತ್ವಿಕ್ ಎಸ್.ಎಸ್, ಲತಾ ರಮೇಶ್, ನಾಮನಿರ್ದೇಶಿತ ನಿರ್ದೇಶಕರಾದ ದೀಪ್ತಿ ಎಸ್.ವಿ, ಸುಂದರ್ ಪಿ.ಎಸ್.ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!