ಕಾರ್ಯಕ್ರಮ

ಕುಶಾಲನಗರದಲ್ಲಿ ಶಾಸಕ ಡಾ.ಮಂತರ್ ಗೌಡ ಹುಟ್ಟುಹಬ್ಬ ಆಚರಣೆ

ಕುಶಾಲನಗರ, ನ 09: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ಹುಟ್ಟುಹಬ್ಬ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ‌ ಕಾರ್ಯ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ‌ಕಾರ್ಯಕರ್ತರು ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ‌ ಕಾರ್ಯ ನಡೆಸಿದರು.
ಈ‌ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್ ಅವರು, ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಶಾಸಕರು ತಮ್ಮ ಆಯ್ಕೆ ಸಮರ್ಥನೀಯ ಎಂಬಂತೆ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮಗೆ ದೊರೆತ ಮತಗಳು‌ ವ್ಯರ್ಥವಾಗದಂತೆ ಅಲ್ಪ ಅವಧಿಯಲ್ಲಿಯೇ ಕ್ಷೇತ್ರಕ್ಕೆ ಸರಿಸುಮಾರು 2 ಸಾವಿರ ಕೋಟಿ‌ ಅನುದಾನ ತರುವ ಮೂಲಕ‌ ಎಲ್ಲಾ ಕ್ಷೇತ್ರಗಳ‌ ಸರ್ವಾಂಗೀಣ ಅಭಿವೃದ್ದಿಗೆ ಪಣ ತೊಟ್ಟಿದ್ದಾರೆ ಎಂದು‌ ಬಣ್ಣಿಸಿದರು‌.
ಈ‌ ಸಂದರ್ಭ ಪ್ರಮುಖರಾದ ಚಂದನ್, ಅಜೀಜ್, ಚಂದ್ರಶೇಖರ್, ಇರ್ಫಾನ್, ಮೂರ್ತಿ, ನಂಜುಂಡಸ್ವಾಮಿ, ಚಂದ್ರು ರಾಜಶೇಖರ್‌ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!