ಕುಶಾಲನಗರ ಅ 27: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಒಂದು ಬದಿಯಲ್ಲಿ ತುಂಬಿರುವ ಕಾಡುಮಯ ಪ್ರದೇಶ ಸ್ಗಚ್ಚತೆಗೆ ಹೆಚ್.ಶಿವರಾಮೇಗೌಡರ ಕರ್ನಾಟಕದ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಕರವೇ ಜಿಲ್ಲಾಧ್ಯಕ್ಷ ಡಾ.ಬಿ
ಎ.ದಿನೇಶ್ ಶೆಟ್ಟಿ ನೇತೃತ್ವದಲ್ಲಿ ನಿಲ್ದಾಣದ ಟಿಸಿ ಅವರನ್ನು ಭೇಟಿಯಾಗಿ ಮೌಖಿಕವಾಗಿ ಮನವಿ ಮಾಡಲಾಯಿತು. ಆಳೆತ್ತರೆಕ್ಕೆಕಾಡು ಗಿಡಗಳು ಬೆಳದು ನಿಂತಿದೆ. ವಿಷಜಂತುಗಳ ವಾಸ ತಾಣವಾಗಿರುವ ಕಾರಣ ಪ್ರಯಾಣಿಕರಿಗೆ ಸೇರಿದಂತೆ ಸದರಿ ಪ್ರದೇಶ ಸುತ್ತಮುತ್ತಲಿನ ಸಾರ್ವಜನಿಕರಿಗೆ ಉಂಟಾಗಬಹುದಾದ ಅಪಾಯ ತಪ್ಪಿಸುವ ಸಲುವಾಗಿ ಕೂಡಲೆ ಕಾಡು ತೆರವುಗೊಳಿಸಿ ಸ್ವಚ್ಚತೆಗೆ ಒತ್ತು ನೀಡುವಂತೆ ಮನವಿ ಮಾಡಲಾಯಿತು.
ಅಲ್ಲದೆ ಬೈಚನಹಳ್ಳಿಯಿಂದ ಜಾತ್ರಾ ಮೈದಾನಕ್ಕೆ ತೆರಳುವ ರಸ್ತೆಯ ನಡುವೆ ಯುಜಿಡಿ ಮ್ಯಾನ್ ಹೋಲ್ ಕುಸಿದು ಗುಂಡು ಬಾಯ್ದೆರೆದ ಸ್ಥಿತಿಯಿಲ್ಲಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದವರ ಮೂಲಕ ಸರಿಪಡಿಸಲು ಕ್ರಮವಹಿಸಬೇಕು. ಅಲ್ಲದೆ ಸರಕಾರದ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಉದ್ದಿಮೆದಾರರು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಗೆ ಒತ್ತು ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮುಖ್ಯಾಧಿಕಾರಿ ಗಿರೀಶ್ ಅವರನ್ನು ಕೋರಲಾಯಿತು.
ಈ ಸಂದರ್ಭ ಕರವೇ
ಮಹಿಳಾ ತಾಲ್ಲೂಕು ಗೌರವಾಧ್ಯಕ್ಷೆ
ಪುಟ್ಟಮ್ಮ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಜಂಟಿ ಕಾರ್ಯದರ್ಶಿ
ಪ್ರೇಮ, ತಾಲ್ಲೂಕು ಉಪಾಧ್ಯಕ್ಷ
ರಂಗಸ್ವಾಮಿ,ಜಿಲ್ಲಾ ಕಾರ್ಯದರ್ಶಿ
ಎಂ.ಎಸ್. ಸತೀಶ್, ತಾಲ್ಲೂಕು ಕಾರ್ಯದರ್ಶಿ ಕಮಾಲುದ್ದೀನ್,
ಜಿಲ್ಲಾ ಗೌರವಾಧ್ಯಕ್ಷ
ನಾಗರಾಜ್ ಕಾವಲ್ ಕೊಂಡ, ಮಡಿಕೇರಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಕೆ.ಚಂದ್ರು,
ಸಾಮಾಜಿಕ ಜಾಲತಾಣ ಅಧ್ಯಕ್ಷ
ಭರತ್, ಪ್ರಮುಖರಾದ ರಾಜೇಗೌಡ, ಅನಂತು, ವೆಂಕಟೇಶ್ ಇದ್ದರು.
Back to top button
error: Content is protected !!