ಮಳೆ

ಭಾರೀ ಮಳೆ: ಹಲವೆಡೆ ನೀರು ವ್ಯಾಪಿಸಿ ಅವಾಂತರ

ಕುಶಾಲನಗರ, ಅ 23: ಕುಶಾಲನಗರದಲ್ಲಿ ಶುಕ್ರವಾರ ಸಂಜೆ‌ಯಿಂದ ಎಡೆಬಿಡದೆ‌ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಪ್ರದೇಶದಲ್ಲಿ ಚರಂಡಿ ಅವ್ಯವಸ್ಥೆ ಕಾರಣ ನೀರು ಉಕ್ಕಿ ಹರಿದು ಮಳೆ ನೀರು‌ ಶೇಖರಣೆಗೊಂಡು ಅವ್ಯವಸ್ಥೆ ಸೃಷ್ಟಿಸಿದೆ. ತಗ್ಗು ಪ್ರದೇಶಗಳಲ್ಲಿನ ‌ಮನೆಗಳು, ಹೋಟೆಲ್, ಅಂಗಡಿ‌ ಮುಂಗಟ್ಟುಗಳಿಗೆ ನೀರು ನುಗ್ಗುವ ಪರಿಸ್ಥಿತಿ ಏರ್ಪಟ್ಟಿದೆ.

ಕುಶಾಲನಗರದ ಟಾಪ್ ಇನ್ ಟೌನ್ ಹೋಟೆಲ್‌ ಮುಂಭಾಗ ಚರಂಡಿ‌ ನೀರು ಸರಾಗವಾಗಿ ಮುಂದಕ್ಕೆ ಹರಿಯಲು ಸಾಧ್ಯವಾಗದೆ ನೀರು ಹೆದ್ದಾರಿ ಮೇಲೆ ಮಡುಗಟ್ಟಿ ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಿದೆ.
ಚಿಕ್ಕತ್ತೂರು ಗ್ರಾಮದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗುವ ಮುಖಾಂತರ ಆತಂಕ ಸೃಷ್ಠಿಸಿದೆ. ಕೆಲವೆಡೆ ಚರಂಡಿಗಳು ಬ್ಲಾಕ್ ಆಗಿವೆ. ‌ಕಾರು ಚಾಲಕರು‌ ಮಾಲೀಕರ ಬಡಾವಣೆ ಸೇರಿದಂತೆ ಸಮರ್ಪಕ ಚರಂಡಿ‌ ವ್ಯವಸ್ಥೆ ಇಲ್ಲದ ಕಡೆ ನೀರು ರಸ್ತೆಯಲ್ಲಿ ನಿಂತು ಜನ ಸಂಚಾರ ಸ್ಥಗಿತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!