ಕೂಡಿಗೆ, ಅ. 6: ಮಡಿಕೇರಿಯ ವಿದ್ಯಾಸಂಸ್ಥೆಯ 1992-94ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಸ್ನೇಹ ಕೂಟದ ವತಿಯಿಂದ ನಿವೃತ್ತರಿಗೆ, ಅಕಾಲಿಕ ಮರಣ ಹೊಂದಿದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕುಶಾಲನಗರದ ಮುಳ್ಳುಸೋಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿ. ಸಿ. ಮಂಜುನಾಥ್ ರವರು ವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನು ಎಸ್ ಗಂಗಾಧರ ನವರು ಪ್ರಾಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿದರು.
ಸಭೆಯಲ್ಲಿ ನಿವೃತ್ತರಿಗೆ ಹಾಗೂ ಅಕಾಲಿಕ ಮರಣ ಹೊಂದಿದವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ನಂತರ ಗೌರವ ಸ್ವೀಕರಿಸಿದ ನಿವೃತ್ತರಾದವರು ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಂಡರು.ಶಿಕ್ಷಕ ಟಿ. ಆರ್. ರಮೇಶ್ ರವರು ನಿರೂಪಿಸಿದರು , ಶಿಕ್ಷಕಿ ವನಜ ವಂದಿಸಿದರು.
Back to top button
error: Content is protected !!