ಮನವಿ

ಕುಶಾಲನಗರ ಪಟ್ಟಣದಲ್ಲಿ ಹೂ ವ್ಯಾಪಾರಿಗಳಿಗೆ ಶೆಡ್ ನಿರ್ಮಾಣ ಯೋಜನೆ ವಿರೋಧಿಸಿ‌ ಮನವಿ

ಕುಶಾಲನಗರ, ಅ 06: ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಮುಂಭಾಗ ಹೂ ವ್ಯಾಪಾರಕ್ಕೆ ಶೆಡ್ ನಿರ್ಮಾಣ ಯೋಜನೆಗೆ ಆಟೋ ಚಾಲಕರ & ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.

ಕುಶಾಲನಗರದಲ್ಲಿ ಸುಮಾರು 35 ರಿಂದ 40 ವರ್ಷಗಳಿಂದ ಕಾವೇರಿ ಆಟೋ ನಿಲ್ದಾಣದಲ್ಲಿ ಆಟೋಗಳನ್ನು ನಿಲ್ಲಿಸಿಕೊಂಡು ಜೀವನ ಸಾಗಿಸುತ್ತಿದ್ದು. ಕೆಲವು ವರ್ಷಗಳ ಮೊದಲು ಹೂವಿನ ವ್ಯಾಪಾ‌ರಿಗೆ ಸೂಕ್ತ ಸ್ಥಳ ಕಲ್ಪಿಸುವ ತನಕ ( ತಾತ್ಕಾಲಿಕ) ವಾಗಿ ಸಣ್ಣ ಟೇಬಲ್ ಹಾಗೂ ಸ್ಕೂಲ್ ಇಟ್ಟು ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದ್ದರು ಇತ್ತಿಚಿನ ದಿನಗಳಲ್ಲಿ ಶೆಡ್ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ, ವ್ಯಾಪಾರ ಮಾಡಲು ಬರುವ ಗ್ರಾಹಕರು ಕಾರು, ಬೈಕು ಗಳಲ್ಲಿ ವ್ಯಾಪಾರ ಮಾಡಲು ಬಂದು ಆಟೋಗಳಿಗೆ ಡಿಕ್ಕಿ ಪಡಿಸಿ ಆಗಾಗ ಗಲಾಟೆಗಳು ಆಗುತ್ತಿರುತ್ತದೆ. ಆದ್ದರಿಂದ ಈ ಜಾಗದಲ್ಲಿ ಹೂವಿನ ವ್ಯಾಪಾರಸ್ಥರಿಗೆ ಶೆಡ್ ನಿರ್ಮಿಸಲು ಅನುವು ಮಾಡಿಕೊಡಬಾರದು, ಕೊಟ್ಟಿದ್ದೆ ಆದಾ ಪಕ್ಷದಲ್ಲಿ ಸುಮಾರು 2000 ದಿಂದ 2500 ದ ಅಟೋಗಳನ್ನು ಸ್ಥಗಿತ ಗೊಳಿಸಿ ಪುರಸಭೆ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಕೃಷ್ಣದರ್ಶನ್,‌ಮಾಜಿ ಅಧ್ಯಕ್ಷ ಯೋಗೇಶ್, ಮಹೇಶ್ ಮತ್ತು ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!