ಮನವಿ

ಕೂಡ್ಲೂರು ದೊಡ್ಡಮ್ಮ ಬನದಲ್ಲಿದೆ ಅಪಾಯಕಾರಿ ಹುಣಸೇ ಮರ

ಕುಶಾಲನಗರ, ಅ 05: ಗುರುವಾರ ಸುರಿದ ಭಾರೀ ಮಳೆಗೆ ಕೂಡ್ಲೂರಿನಲ್ಲಿ ಪಿಕ್ ಅಪ್ ಜೀಪ್ ಮೇಲೆ ಮರ ಬಿದ್ದು ಮೂರು ದಿನ ಕಳೆದರೂ ಇನ್ನೂ ಮರ ತೆರವು ಮಾಡದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ವರದಿ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಮರ ತೆರವು ಮಾಡಿದೆ. ಕೂಡುಮಂಗಳೂರು- ಕೂಡ್ಲೂರು ದೊಡ್ಡಮ್ಮ ಬನದ ಆವರಣದಲ್ಲಿ ಒಣಗಿ ನಿಂತ ಬೃಹತ್ ಮರವೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯಲಿದ್ದು ಪ್ರಸಕ್ತ ಗಾಳಿ ಮಳೆ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಈ ಹುಣಸೇ ಮರವನ್ನೂ ಕೂಡ ತೆರವು‌ ಮಾಡುವಂತೆ ಗ್ರಾಮಸ್ಥರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!