ಸುಂಟಿಕೊಪ್ಪದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ಸುಂಟಿಕೊಪ್ಪ, ಸೆ.30: ಮಾತೃ ವಾತ್ಸಲ್ಯ ದಿಂದ ಕಟ್ಟಿದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳು ಇಂದು ಪ್ರತಿ ಮನೆಯಲ್ಲಿ ಸ್ವಸಹಾಯದೊಂದಿಗೆ ಭೌದ್ಧಿಕ ವಿಕಾಸಕ್ಕೂ ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮಹಿಳೆಯರ ಸರ್ವೊತ್ತೋಮುಖ ಸಬಲೀಕರಣಗೊಂಡಿದೆ ಎಂದು ಆನಂದ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರದಂದು ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಅಯೋಜಿತವಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಸಮಾರಂಭವನ್ನು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ನ ಉಡಪಿ ಪ್ರಾದೇಶಿಕ ವಿಭಾಗ ನಿರ್ದೇಶಕರಾದ ಆನಂದ್ ಸುವರ್ಣ ಉದ್ಘಾಟಿಸಿ ಮಾತನಾಡಿದ ಅವರು 1982 ರಲ್ಲಿ ಆರಂಭಗೊAಡ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ರಾಜ್ಯಾದ್ಯಂತ 55 ಲಕ್ಷ ಸದಸ್ಯರನ್ನು ಹೊಂದಿದ್ದು, ಈ ಹಿಂದೆ ಕೊಡಗಿನ ಕಾರ್ಯಕ್ರಮಗಳು ಸುಳ್ಯದ ಕಛೇರಿಯಿಂದ ನಿರ್ವಹಣೆ ಮಾಡಿಕೊಳ್ಳುತ್ತಿದ್ದು, ಇದೀಗ ಕೊಡಗಿಗೆ ಯೋಜನಾ ಕಛೇರಿಯನ್ನು ನೀಡಲಾಗಿದೆ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳದ ದರ್ಮಾಧಿಕಾರಿಗಳು ಹೆಚ್ಚಿನ ಒತ್ತನ್ನು ನೀಡಿದ್ದು ಅದರ ಜೋತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶ ಮತ್ತು ಸರಕಾರಿ ಶಾಲೆಗಳಿಗೆ ಒಂದು ಸಾವಿರ ಶಿಕ್ಷಕರನ್ನು ಒದಗಿಸಲಾಗಿದ್ದು, 77 ಸಾವಿರ ಬೆಂಚು ಡೆಸ್ಕ್ಗಳನ್ನು ನೀಡಲಾಗಿದ್ದು ಇದು ಮೂರುವರೆ ಲಕ್ಷ ಮಕ್ಕಳ ಮುಂದಿನ ಭವಿಷ್ಯಕ್ಕೆ ಉತ್ತೇಜನಕಾರಿಯಾಗಿದೆ. ಹೈನುಗಾರಿಕೆಯಲ್ಲಿ 5 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಹಾಯಧನ ನೀಡಲಾಗುತ್ತಿದ್ದು 100 ಅನಾಥಶ್ರಮಗಳಿಗೆ ಸಹಾಯ ಮಾಡಲಾಗುತ್ತಿದೆ. ಸಾವಿರ ಅನಾಥರಿಗೆ ವಾತ್ಸಲ್ಯ ಮನೆಗಳನ್ನು ನೀಡಲಾಗಿದೆ. ಪಾಕೃತಿಕ ವಿಕೋಪಗಳನ್ನು ಎದುರಿಸಲು 10 ಸಾವಿರ ಮಂದಿಯ ಶೌರ್ಯ ವಿಪತ್ತು ತಂಡವನ್ನು ರಚಿಸಿ ತರಬೇತಿ ನೀಡಲಾಗಿದೆ.
ಮಹಿಳೆಯರು ಕುಟುಂಬದ ಕಣ್ಣಾಗಿದ್ದು ಪ್ರಸ್ತುತ ಕಾಲಘಟ್ಟದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಮೇಲೆ ಸಂಪನ್ನೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದ್ದು ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಸುಮತಿಯವರು ಕೌಟುಂಬಿಕ ವಿಚಾರಗಳ ಬಗ್ಗೆ ಹತ್ತು ಉದಾಹರಣೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಮುಖಗಳನ್ನು ತೆರೆದಿಟ್ಟರು. ಪೋಷಕರು ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ ಮತ್ತು ಅವರೊಂದಿಗೆ ಸಭಾಷಣೆಗಳನ್ನು ನಡೆಸುವ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಕುರಿತು ಸದಾಜಾಗೃತರಾಗಿರಬೇಕೆಂದು ಅವರು ಕರೆ ನೀಡಿದರು ಮಹಿಳಾ ಸಹಾಯವಾಣಿ 181 ಮತ್ತು ಅಕ್ಕಪಡೆ ತಂಡವು ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಸಮಾಲೋಚನೆಗೆ ಸದಾಸಿದ್ಧವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಸಂಪರ್ಕಿಸುವAತೆ ಕಿವಿಮಾತು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕೊಡಗು ಜಿಲ್ಲಾ ಯೋಜನಾ ನಿರ್ದೇಶಕ ವಿಠಲ ಸಾಲ್ಯನ್, ಸಂಪನ್ಮೂಲ ವ್ಯಕ್ತಿಯಾಗಿದ್ದ ಶಿಕ್ಷಣ ಇಲಾಖೆಯ ವೀಣಾ ರೈ, ಜನಜಾಗೃತಿ ಸಮಿತಿಯ ಹಿರಿಯ ಸದಸ್ಯ ಡಿ.ನರಸಿಂಹ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಜ್ಞಾನಪದ ತಜ್ಞೆ ರಾಣಿ ಮಾಚಯ್ಯ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದ ಶಿವಪ್ಪ ಅವರಿಗೆ ಮಾಶಸನಾ ಮಂಜೂರಾತಿ ಪತ್ರವನ್ನು ನೀಡಲಾಯಿತು. ಹಾಗೆಯೇ ಮದೆನಾಡು ಸ್ವಸಹಾಯ ಸಂಘದಲ್ಲಿ ಶ್ರೀನಿಧಿ ಜ್ಞಾನ ವಿಕಾಸ ಸಮಿತಿಯನ್ನು ಘೋಷಣೆ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ಧೆ, ಕರಕೂಶಲ ವಸ್ತುಗಳ ಮಳಿಗೆ, ಮತ್ತು ಸಾಂಸ್ಕೃತಿಕ ಕÁರ್ಯಕ್ರಮ ಮನರಂಜಿಸಿದವು.
ಮೊದಲಿಗೆ ರಕ್ಷಾ ಶ್ರೀ ತಂಡದವರು ಪ್ರಾರ್ಥಿಸಿ, ಕ್ಷೇತ್ರ ಯೋಜನಾಧಿಕಾರಿ ಪುರುಷೋತ್ತಮ ಸ್ವಾಗತಿಸಿದರು,ಕಾನ್ಬೈಲ್ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ನಿರೂಪಿಸಿ ವಂದಿಸಿದರು.



