ಕುಶಾಲನಗರ, ಸೆ 11: ಕುಶಾಲನಗರ ಸವಿತಾ ಸಮಾಜದ ವಾರ್ಷಿಕೋತ್ಸವ ಹಾಗೂ ಮಹಾಸಭೆ ಕಾರ್ಯಕ್ರಮ ಗುಮ್ಮನಕೊಲ್ಲಿ ಹಾರಂಗಿ ರಸ್ತೆಯ ಸಂಘದ ಆವರಣದಲ್ಲಿ ನಡೆಯಿತು.
ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತಮ್ಮ ಸಮುದಾಯದ ಬಗ್ಗೆ ಎಂದಿಗೂ ಕೀಳರಿಮೆ ಬರಬಾರದು. ಎಲ್ಲಾ ಕ್ಷೇತ್ರಗಳಂತೆ ನಿಮ್ಮ ವೃತ್ತಿ ಕೂಡ ಅತ್ಯಂತ ಮಹತ್ವದ್ದು ಹಾಗೂ ಪ್ರಮುಖವಾದದ್ದು. ಯುವ ಸಮೂಹ ಸುಶಿಕ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ವೃತ್ತಿ ಹೆಚ್ಚಾಗಿ ಮುಂದುವರೆಯುತ್ತಿಲ್ಲ ಎನ್ನುವ ವಿಚಾರ ಅರಿತುಕೊಳ್ಳಬೇಕಿದೆ. ಸಮಾಜದಲ್ಲಿ ಸಣ್ಣ ಸಮುದಾಯಗಳನ್ನು ಮೇಲೆತ್ತುವುದು ನಮ್ಮ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಜಗದೀಶ್ ಭಂಡಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಸಮಾಜದವರ ವೃತ್ತಿ ಬೇರೆಯವರ ಪಾಲಾಗುತ್ತಿದೆ. ಹಲವು ಕೊರತೆಗಳ ನಡುವೆಯೂ ಅತ್ಯಂತ ಶ್ರಮವಹಿಸಿ ಸಂಘಕ್ಕೆ ನಿವೇಶನ ಖರೀದಿಸಲಾಗಿದೆ. ಸಮುದಾಯದವರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಸಮುದಾಯ ಭವನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಭಾ ಭವನ ನಿರ್ಮಿಸಿಕೊಡುವಂತೆ ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.
ಅತಿಥಿಗಳಾಗಿ
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಪಾಲ್ಗೊಂಡಿದ್ದರು.
ಸವಿತಾ ಮಹರ್ಷಿ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಪೂಜಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ಹೊಸ ಕಾರ್ಯಕಾರಿ ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಹಳೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ದೊರೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ, ಕುಶಾಲನಗರ ಹೋಬಳಿ ಸಂಘದ ಗೌರವಾಧ್ಯಕ್ಷ ಬಿ.ಟಿ.ಸತ್ಯಾನಂದ, ಉಪಾಧ್ಯಕ್ಷ ಎಂ.ಸಿ.ದೊರೆಸ್ವಾಮಿ, ಕಾರ್ಯದರ್ಶಿ ಎಂ.ಎಸ್.ರವೀಂದ್ರ, ಖಜಾಂಚಿ ಜಿ.ಶಿವಕುಮಾರ್, ನಿರ್ದೇಶಕರಾದ ಹೆಚ್.ಟಿ.ಜಯಂತ್, ಬಿ.ಆರ್.ಮಲ್ಲೇಶ್, ತೇಜ ಬಿ.ಜಿ, ಕೆ.ಪಿ.ಶಂಕರ, ಹೆಚ್.ಎಂ.ಅರ್ಜುನ, ರಾಚಪ್ಪ, ಕೆ.ಎಸ್.ನವೀನ್ ಹಾಗೂ ಸದಸ್ಯರು ಇದ್ದರು.
Back to top button
error: Content is protected !!