ಕುಶಾಲನಗರ, ಆ 13: ಕುಶಾಲನಗರ ಪುರಸಭೆ ವಿರುದ್ದ ಬಿಜೆಪಿಗರ ಪ್ರತಿಭಟನೆಯನ್ನು ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಖಂಡನೆ ವ್ಯಕ್ತಪಡಿಸಿದೆ.
ಮುಖ್ಯಾಧಿಕಾರಿ ಕಾನೂನಿನ್ವಯ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಬಿಜೆಪಿಗರು ವಿನಾಕಾರಣ ಪಕ್ಷವನ್ನು ಎಳೆದು ತಂದಿರುವುದು ಸರಿಯಲ್ಲ. ಅಧಿಕಾರಿಗಳು ಅವರ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡಬೇಕಿದೆ ಎಂದು ಡಿ.ಎಸ್.ಎಸ್.
ರಾಜ್ಯ ಸಮಿತಿ ಸದಸ್ಯ ಹೆಚ್.ಪಿ. ಶಿವಕುಮಾರ್,
ಕೊಡಗು ಜಿಲ್ಲಾ ಸಂಚಾಲಕ ಹೆಚ್.ಜೆ.ದಾಮೋದರ್,
ತಾಲೂಕು ಸಂಚಾಲಕ ಕಾವೇರಪ್ಪ ತಿಳಿಸಿದ್ದಾರೆ.
Back to top button
error: Content is protected !!