ಕಾರ್ಯಕ್ರಮ

ಮಳೆ ಹಾನಿ ಪರಿಶೀಲನೆಗೆ ಕೊಡಗಿಗೆ ಆಗಮಿಸಿದ‌ ಉಸ್ತುವಾರಿ ಸಚಿವರು

ಕುಶಾಲನಗರ, ಆ 04: ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಕೊಡಗು-ಮೈಸೂರು ಗಡಿಯಲ್ಲಿ ಆದರದಿಂದ ಬರಮಾಡಿಕೊಳ್ಳಲಾಯಿತು. ಕ್ಷೇತ್ರ ಶಾಸಕ ಡಾ.ಮಂತರ್ ಗೌಡ‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಕಾಂಗ್ರೆಸ್ ಮುಖಂಡರು, ‌ಕಾರ್ಯಕರ್ತರು, ಅಧಿಕಾರಿಗಳು ಸಚಿವರನ್ನು ಬರಮಾಡಿಕೊಂಡರು.

ಕೊಡಗು ಜಿಲ್ಲೆಯ ಎಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಅತಿವೃಷ್ಟಿ / ಬರ ಪರಿಸ್ಥಿತಿಯ ಕುರಿತು ಸಚಿವರು ಜಿಪಂ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಮಡಿಕೇರಿ ತಾಲ್ಲೂಕು ಕೆ.ನಿಡುಗಣಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆ ವೀಕ್ಷಣೆ, ಕುಶಾಲನಗರ ತಾಲ್ಲೂಕು ಹಾರಂಗಿ ಜಲಾಶಯಕ್ಕೆ ಭೇಟಿ ಮತ್ತು ವೀಕ್ಷಣೆ ಹಾಗೂ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!