ಪ್ರಕಟಣೆ

ಆ 8 ರಂದು ಮಡಿಕೇರಿಗೆ ಸುತ್ತೂರು ಶ್ರೀ ಭೇಟಿ

ಲಿಂಗಾಯಿತ ರಾಜರ ಅರಮನೆ ಹಾಗೂ ಗದ್ದಿಗೆ ಪರಿಶೀಲನೆ

ಕುಶಾಲನಗರ, ಆ 04 : ಸಾವಿರ ವರ್ಷಗಳ ಇತಿಹಾಸವಿರುವ ಮೈಸೂರು ಜಿಲ್ಲೆ ಸುತ್ತೂರು ವೀರಸಂಸ್ಥಾನ ಮಠದ 24 ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಆ 8 ರಂದು ಅಪರಾಹ್ನ 3 ಗಂಟೆಗೆ ಮಡಿಕೇರಿಯ ಲಿಂಗಾಯಿತ ರಾಜರ ಅರಮನೆ ಹಾಗೂ ಗದ್ದಿಗೆ ಗಳನ್ನು ಪರಿಶೀಲಿಸುವ ಸಂಬಂಧ ಆಗಮಿಸುತ್ತಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಆಗಮಿಸುವ ಶ್ರೀಗಳನ್ನು ರಾಜರ ಕೋಟೆ ಬಳಿ ಸಾಮೂಹಿಕವಾಗಿ ಸ್ವಾಗತಿಸಿಕೊಳ್ಳಲಾಗುತ್ತದೆ.
ಸ್ವಾಮೀಜಿಗಳು ಆಗಮಿಸುವ ಸಂದರ್ಭದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ವೀರಶೈವ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಬಳಿಕ ವಿರಾಜಪೇಟೆ ಅರಮೇರಿ ಮಠಕ್ಕೆ ಭೇಟಿ ನೀಡಿ ಮೈಸೂರಿಗೆ ತೆರಳಲಿದ್ದಾರೆ ಎಂದು ಕೊಡಗು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!