ಕಾಮಗಾರಿ
ದವಸ ಭಂಡಾರ ಜಾಗಕ್ಕೆ ಬೇಲಿ


ಕುಶಾಲನಗರ, ಜು 26: ರಂಗಸಮುದ್ರ ದವಸ ಭಂಡಾರಕ್ಕೆ ಸೇರಿದ ಜಾಗಕ್ಕೆ ಬೇಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗುಡ್ಡೆಹೊಸೂರು ಗ್ರಾಪಂ ಕಟ್ಟಡ ಹಿಂಭಾಗದಲ್ಲಿರುವ ಭಂಡಾರಕ್ಕೆ ಸೇರಿದ 12 ಸೆಂಟ್ ಜಾಗವನ್ನು ಬೇಲಿ ಅಳವಡಿಸುವ ಮೂಲಕ ಸಂರಕ್ಷಿಸುವ ಕಾರ್ಯಕ್ಕೆ ಭಂಡಾರ ಆಡಳಿತ ಮಂಡಳಿ ಪದಾಧಿಕಾರಿಗಳು ಮುಂದಾಗಿದ್ದಾರೆ.
